ಆನ್ ಲೈನ್ ಅಲ್ಲೇ ವಾಹನದ ಮೇಲಿರುವ ದಂಡವೆಷ್ಟು ಎಂದು ತಿಳಿಯುವುದು ಹೀಗೆ…

ವಾಹನದ ಮೇಲಿನ ದಂಡದ ಬಗ್ಗೆ ಅನೇಕರಿಗೆ ಗೊತ್ತಿರುವುದಿಲ್ಲ. ಪೊಲೀಸರು ತಿಳಿಸಿದ ಬಳಿಕ ಅಥವಾ ನೋಟಿಸ್ ಬಂದ ಬಳಿಕವೇ ವಾಹನ ಮೇಲಿರುವ ದಂಡದ ಬಗ್ಗೆ ಗೊತ್ತಾಗುತ್ತದೆ. ಕೆಲವರು ಸಾವಿರಾರು ರೂಪಾಯಿಗಳ ದಂಡವನ್ನು ಒಮ್ಮೆಲೆ ತೆರೆಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಅನೇಕರಿಗೆ ವಾಹನ ಮೇಲಿನ ದಂಡವನ್ನು ಸುಲಭವಾಗಿ ಪರೀಕ್ಷಿಸುವ ದಾರಿ ತಿಳಿದಿಲ್ಲ. ಸದ್ಯ ಆನ್​ಲೈನ್ ಮೂಲಕ ವೇಗವಾಗಿ ತಿಳಿಯವಹುದಾಗಿದೆ. ಆದರೆ ಅದು ಹೇಗೆ ಎಂಬುದು ಗೊತ್ತಾ? ಇಲ್ಲಿದೆ ಮಾಹಿತಿ.

ಸ್ಮಾರ್ಟ್​ಫೋನ್​ವೊಂದಿದ್ದರೆ ಸಾಕು ಆನ್​ಲೈನ್ ಮೂಲಕ ವಾಹನದ ಮೇಲಿನ ದಂಡವನ್ನು ಪರೀಕ್ಷಿಸಬಹುದಾಗಿದೆ. ಅದಕ್ಕಾಗಿ ಇ-ಚಲನ್ ವೆಬ್​ಸೈಟ್​ಗೆ ತೆರಳಿಬೇಕಿದೆ.

ಇದು ‘ಒನ್ ನೇಷನ್ ಒನ್ ಚಲನ್’ ಉಪಕ್ರಮವಾಗಿದ್ದು, ಈ ಪೇಜ್ಗೆ ತೆರಳಿದಂತೆ ಚೆಕ್ ಚಲನ್ ಸ್ಟೇಟಸ್ ಎಂಬ ಆಯ್ಕೆ ಕಾಣಿಸುತ್ತದೆ.

ಅದರಲ್ಲಿ ಲೈಸನ್ಸ್ ನಂಬರ್, ಚಲನ್ ನಂಬರ್ ಅಥವಾ ವಾಹನ ರಿಜಿಸ್ಟ್ರೇಷನ್ ಸಂಖ್ಯೆಯನ್ನು ಬಳಸಿ ಚಲನ್ ಹುಡುಕುವುದಕ್ಕೆ ಅವಕಾಶವಿದೆ.

ಯಾವುದೇ ವಿವರವನ್ನು ಆಯ್ಕೆ ಮಾಡಿ ಕ್ಯಾಪ್ಚಾ ಎಂಟರ್ ಮಾಡಿ ಮುಂದುವರಿಯಬಹುದಾಗಿದೆ. ಚಲನ್ ವಿವರಗಳು ಜನರೇಟ್ ಆದ ನಂತರ ‘ಪೇ ನೌ’ ಆಯ್ಕೆಯನ್ನು ಕ್ಲಿಕ್ ಮಾಡಿ ಪಾವತಿಸಬೇಕು.

ಸ್ಮಾರ್ಟ್​ಫೋನ್ ಮೂಲಕವೇ ವಾಹನ ಮೇಲಿನ ದಂಡವನ್ನು ಪರೀಕ್ಷಿಸಬಹುದಾಗಿದೆ. ಇದರಿಂದ ಬಳಕೆದಾರರಿಗೆ ತುಂಬಾ ಉಪಯೋಗವಿದೆ.

ಅನೇಕರಿಗೆ ವಾಹನ ಮೇಲಿನ ದಂಡವಿರುವ ಬಗ್ಗೆ ತಿಳಿದಿರುವುದಿಲ್ಲ. ಆದರೆ ಇ-ಚಲನ್ ವೆಬ್​ಸೈಟ್ ಮೂಲಕ ತಿಳಿಯಬಹುದಾಗಿದೆ.

error: Content is protected !!