ಆನೆ ಮರಿಯ ರಕ್ಷಣೆ

ತಾಯಿಯ ಹಿಂಡಿನಿಂದ ಬೇರ್ಪಟ್ಟ ಮರಿಯಾನೆಯೊಂದು ಮಳೆಯ ಪ್ರವಾಹಕ್ಕೆ ಕಿರುತೋಡುವಿನಲ್ಲಿ ಕೊಚ್ಚಿ ಹೋಗುತ್ತಿದ್ದ ಸಂದರ್ಭ ಸ್ಥಳೀಯ ತೋಟದವರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿರುವ ಘಟನೆ ನಡೆದಿದೆ.

ಇಲ್ಲಿನ ಮಂಚಳ್ಳಿ ನಿವಾಸಿ ಚೋಡುಮಾಡ ರಾಜ ತಿಮ್ಮಯ್ಯ ಎಂಬುವವರು ತೋಟಕ್ಕೆ ತೆರಳುವ ಸಂದರ್ಭ ಈ ದೃಶ್ಯ ಕಂಡು ಬಂದು ತಕ್ಷಣ ಹರಿಯುತ್ತಿರುವ ತಗಡಿನ ನೀರಿನಲ್ಲಿ ಮರಿಯಮ್ಮ ಸೊಂಡಿಲನ್ನು ಹಿಡಿದು ದಡ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.