ಆನೆ ಮನೆ ಫೌಂಡೇಷನ್ ತೆರವು ಗೊಳಿಸಲು ಆದೇಶ; ಪ್ರತಿಕ್ರಿಯೆ ಬಾರದ್ದಕ್ಕೆ ಕ್ರಮ

ಕೊಡಗು: ಪ್ರಜ್ಞಾ ಚೌತಾ ಒಡೆತನದಲ್ಲಿ ದುಬಾರೆಯಲ್ಲಿರುವ ಖಾಸಗಿ ಶಿಬಿರ ತೆರವುಗೊಳಿಸಲು ಆದೇಶ ಹೊರಡಿಸಲಾಗಿದೆ.

ಐದು ಹೆಣ್ಣು,ಎರಡು ಗಂಡು ಆನೆಗಳನ್ನು ಸಾಕುತ್ತಿದ್ದ ಪ್ರಜ್ಞಾ ಚೌತಾ ಅವರು ಸಾರ್ವಜನಿಕರು, ಕಾಫಿ ಬೆಳೆಗಾರರು,ಅರಣ್ಯ ಇಲಾಖೆಯ ಮನ್ನಣೆ ನೀಡದ ಹಿನ್ನಲೆಯಲ್ಲಿ ಈ ಆದೇಶ ಅರಣ್ಯ ಇಲಾಖೆಯಿಂದ ಹೊರಬಿದ್ದಿದೆ.

2021 ರ ಜೂನ್ 5 ರಿಂದ ಇಲ್ಲಿವರೆಗೂ ಪ್ರಜ್ಞಾ ಚೌತಾರಿಂದ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ರೆಡಿಯೋ ಕಾಲರ್ ಅಳವಡಿಸಿ, ದುಬಾರೆ ಅರಣ್ಯ ವ್ಯಾಪ್ತಿಯಿಂದ ತೆರವು ಮಾಡಲು ಅರಣ್ಯ ಇಲಾಖೆ ಮುಖ್ಯ ವಾರ್ಡನ್ ವಿಜಯಕುಮಾರ್ ಗೋಗಿ ಆದೇಶ ಹೊರಡಿಸಿದ್ದಾರೆ.




ನಾಗರಹೊಳೆಯ ಬಳ್ಳೆ ಆನೆ ಶಿಬಿರ ಇಲ್ಲವೇ ಬಂಡೀಪುರ, ರಾಮಾಪುರ ಆನೆ ಶಿಬಿರಕ್ಕೆ ಕಳುಹಿಸಲು ಸೂಚನೆ ನೀಡಲಾಗಿದೆ.