ಆನೆ ದಾಳಿಗೆ ವ್ಯಕ್ತಿ ಬಲಿ

ಸಾಂದರ್ಭಿಕ ಚಿತ್ರ

ಆನೆ ದಾಳಿಗೆ ವ್ಯಕ್ತಿ ಬಲಿಯಾಗಿದ್ದಾರೆ. ಚೆಟ್ಟಳ್ಳಿ ಸಮೀಪದ ಕುಡ್ಲೂರ ಚೆಟ್ಟಳ್ಳಿ (ಮಲಕೋಡುವಿನಲ್ಲಿ) ದುರ್ಘಟನೆ ನಡೆದಿದೆ.

ಬೆಳಗ್ಗೆ ಕೆಲಸಕ್ಕೆ ತೆರಳುವಾಗ ಕಂಡಕರೆ ಸಮೀಪದಲ್ಲಿ ಆನೆಯಿಂದ ತುಳಿತಕ್ಕೊಳಗಾಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಮಡಿಕೇರಿ ಜಿಲ್ಲಾ ಆಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸುತ್ತಿರುವ ದಾರಿ‌ ಮಧ್ಯೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕುಡ್ಲೂರು ಚೆಟ್ಟಳ್ಳಿ (ಮಲಕೋಡ್ )ನಿವಾಸಿ ಮೊಹಮ್ಮದ್ ಆನೆ ದಾಳಿಯಿಂದ ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.

error: Content is protected !!