ಆನೆ ಕಾಡಿನಲ್ಲಿ ಸರಣಿ ಅಪಘಾತ

ಮಡಿಕೇರಿ ಕುಶಾಲನಗರ ನಡುವಿನ ಆನೆಕಾಡುವಿನಲ್ಲಿ ಸರಣಿ ಅಪಘಾತ ನಡೆದಿದೆ.
ಪ್ರಯಾಣಿಕರನ್ನು ಇಳಿಸಲು ನಿಲ್ಲಿಸಿದ ಕೆ.ಎಸ್.ಆರ್.ಟಿ.ಸಿ ಬಸ್ ಹಿಂಬದಿಗೆ ಡಿಕ್ಕಿ ಹೊಡೆದ ಕಾರು ಜಖಂಗೊಂಡಿದೆ.

ಅಪಘಾತವಾಗಿ ನಿಂತಿದ್ದ ವಾಹನಗಳಿಗೆ ಟವೇರಾ ಕಾರು ಡಿಕ್ಕಿ ಹೊಡೆದಿದೆ. ಮಳೆಯಿಂದ ನಿಯಂತ್ರಣ ಕಳೆದುಕೊಂಡ ಕಾರುಗಳು ಹೊಡೆದುಕೊಂಡಿವೆ. ಘಟನೆಯಲ್ಲಿ ಮೂವರಿಗೆ ಗಾಯ,ಕುಶಾಲನಗರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಶಾಲನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ,ಪರಿಶೀಲನೆ ನಡೆಸಿದ್ದಾರೆ.