ಆಧಾರ್ ದೃಢೀಕರಣ ಮಾಡಿಲ್ಲದಿದ್ದರೆ ಪಡಿತರ ಸಿಗೋದಿಲ್ಲ

ಜಿಲ್ಲೆಯಲ್ಲಿ ಆಗಸ್ಟ್ 1 ರಿಂದ ಆಗಸ್ಟ್ 10 ರವರೆಗೆ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರ ಆಧಾರ್ ದೃಢೀಕರಣವನ್ನು ಇ-ಕೆವೈಸಿ ಮೂಲಕ ಸಂಗ್ರಹಿಸಲಾಗುತ್ತಿದ್ದು, ಈ ಅವಧಿಯಲ್ಲಿ ಆಧಾರ್‌ ದೃಢೀಕರಣ ಮಾಡದೇ ಇರುವ ಫಲಾನುಭವಿಗಳ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕಿ ಕುಮುದಾ ಶರತ್ ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ಎಲ್ಲಾ ಫಲಾನುಭವಿಗಳ ಆಧಾರ್‌ಸಂಖ್ಯೆ ಮಾಹಿತಿ ಪಡಿತರ ಚೀಟಿಯೊಂದಿಗೆ ಜೋಡಣೆಯಾಗಿದೆ. ಕುಟುಂಬದೊಂದಿಗೆ ವಾಸವಿಲ್ಲದ, ಮೃತರಾದ ಫಲಾನುಭವಿಗಳ ಮಾಹಿತಿಗಳನ್ನು ಗುರುತಿಸಿ, ಅಂತಹ ಫಲಾನುಭವಿಗಳ ಮಾಹಿತಿಗಳನ್ನು ಆಹಾರ ದತ್ತಾಂಶದಿಂದ ಕಡಿತಗೊಳಿಸಿ, ಪಡಿತರದಾಸ್ತಾನು ಉಳಿಕೆಯಾಗಲು ಪಡಿತರಚೀಟಿದಾರರ ಎಲ್ಲಾ ಸದಸ್ಯರ ಆಧಾರ್ ಸಂಖ್ಯೆಗಳನ್ನು ಮೂಲಕ ದೃಢೀಕರಿಸಿಕೊಳ್ಳಲಾಗುತ್ತಿದೆ ಎಂದ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಆಧಾರ್ ದೃಢೀಕರಣವನ್ನು ಮಾಡದಿರುವವರ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲು ಕ್ರಮವಹಿಸಲಾಗುವುದು. ಆದ್ದರಿಂದಜಿಲ್ಲೆಯಎಲ್ಲಾ ಪಡಿತರಚೀಟಿದಾರರ ಸದಸ್ಯರು ತಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ಆಧಾರ್ ದೃಢೀಕರಣವನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.

error: Content is protected !!