ಆತಂಕ ಸೃಷ್ಟಿಸಿದ ಗಾಯಾಳು ಒಂಟಿ ಸಲಗ

ಕುಶಾಲನಗರ ತಾಲ್ಲೂಕಿನ ನೆಲ್ಯುದಿಕೇರಿ ಮತ್ತು ಅಭ್ಯತ್ಮಂಗಲದಲ್ಲಿ ಒಂಟಿ ಸಲಗ ಅಡ್ಡಾಡುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಅಭ್ಯತ್ಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗದ ಟಾಟಾ ಕಾಫಿ ತೋಟದಲ್ಲಿ ಓಡಾಡುತ್ತಿದ್ದು,ಅದರ ಒಂದು ಕಾಲಿಗೆ ಗಾಯವಾಗಿದೆ ಎನ್ನಲಾಗಿದ್ದು, ಇತ್ತೀಚೆಗೆ ನೆಲ್ಯುದಿಕೇರಿಯ ಎಂ.ಜಿ ಕಾಲೊನಿಯಲ್ಲಿ ಕಂಡು ಬಂದದ್ದು,ಇದೇ ಆನೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಆತಂಕದಲ್ಲಿರುವ ಸ್ಥಳೀಯರು, ಶಾಲೆಗೆ ಮಕ್ಕಳು ತೆರಳುವ ಸಂದರ್ಭ ಇಲ್ಲವೇ ಕಾರ್ಮಿಕರು ತೋಟದಲ್ಲಿ ಕೆಲಸ ಮಾಡುವ ಸಂದರ್ಭ ದಾಳಿ ಮಾಡಬಹುದು ಎನ್ನವ ಕಾರಣಕ್ಕೆ ಆನೆಯನ್ನು ಸೆರಿ ಹಿಡಿದು,ಸೂಕ್ತ ಚಿಕಿತ್ಸೆ ನೀಡಿ ದುಬಾರೆ ಸಾಕಾನೆ ಶಿಬಿರಕ್ಕೆ ಬಿಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.