fbpx

ಆಟೋ ಚಾಲಕನ ಮೇಲೆ ಕಾಡಾನೆ ದಾಳಿ


ಕೃಪೆ:ಮಂಜು ಪೂಜಾರಿ,ಸುಂಟಿಕೊಪ್ಪ
ಕೊಡಗು(ಸುಂಟಿಕೊಪ್ಪ): ಇಲ್ಲಿಗೆ ಸಮೀಪದ ಅಂದಗೊವೆ ಕಲ್ಲೂರು ಸೇರುವ ದಾರಿಯಲ್ಲಿ ಇಂದು ಬೆಳಗಿನ ಜಾವ ಸ್ಥಳೀಯ ಆಟೋ ಚಾಲಕ ಬಾಬು ಎಂಬುವರು ಇಬ್ಬರು ಪ್ರಯಾಣಿಕರನ್ನು ಕರೆದುಕೊಂಡು ಸುಂಟಿಕೊಪ್ಪಕ್ಕೆ ಹೋಗುವಾಗ ದಾರಿ ಮಧ್ಯದಲ್ಲಿ ಕಾಡಾನೆ ದಾಳಿ ನಡೆಸಿದೆ. ಆನೆ ತನ್ನ ಪಾಡಿಗೆ ಹೋಗಲಿ ಎಂದು ಆಟೋ ನಿಲ್ಲಿಸಿದ ಸಂದರ್ಭ ಕಾಡಾನೆ ಬಾಬು ಮೇಲೆ ದಾಳಿ ಮಾಡಿದ್ದು, ಸುಮಾರು 50 ಮೀಟರ್ ಅಟ್ಟಾಡಿಸಿದೆ.

ಈ ಸಂದರ್ಭ ಆಟೋದಲ್ಲಿದ್ದ ಪ್ರಯಾಣಿಕರು ಕಿರುಚಿಕೊಂಡ ಹಿನ್ನಲೆಯಲ್ಲಿ ಆನೆ ಕಾಫಿ ತೋಟದ ನಡುವೆ ಪರಾರಿಯಾಗಿದೆ .ಘಟನೆ ಸಂಬಂಧ ಸಣ್ಣ ಪುಟ್ಟ ಗಾಯಗಳೊಂದಿಗೆ ಬಾಬು ಪ್ರಾಣಾಪಾಯದಿಂದ ಪಾರಾಗಿದ್ದು ಸುಂಟಿಕೊಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂಧಿ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!