ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ನಡೆದ ಬೈಕ್ ಜಾಥಾ

ಅಜಾದಿಕ ಅಮೃತ ಮಹೋತ್ಸವದ ಅಂಗವಾಗಿ ಮಡಿಕೇರಿ ಗ್ರಾಮಾಂತರ ಮಂಡಲ ಮತ್ತು ಯುವಮೋರ್ಚಾಗಳ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿದ್ದ ಬೈಕ್ ಜಾಥ ಯಶಸ್ವಿಯಾಗಿ ನಡೆಯಿತು.

ಈ ಜಾಥಾವು ನಾಪೋಕ್ಲು ಭಗವತಿ ದೇವಾಲಯದಿಂದ ಆರಂಭಗೊಂಡು ಬೇತು ರಸ್ತೆಗಾಗಿ ಮುಂದುವರೆದು ನೆಲಜಿ ಬಲ್ಲಮಾವಟಿ,ಕುಂಜಿಲ, ಕಕ್ಕಬ್ಬೆ, ಪಾಡಿ ಈಗ್ಗುತ್ತಪ್ಪ ದೇವಾಲಯದ ಮಾರ್ಗವಾಗಿ ಸುಮಾರು 40 ಕಿ.ಮೀ ಸಂಚಾರಿಸಿತು. ಈ ಜಾಥಕ್ಕೆ ರಾಜ್ಯ ಕಾರ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಮನು ಮುತ್ತಪ್ಪನವರು ನಾಪೋಕ್ಲು ಭಗವತಿ ದೇವಾಲಯದ ಆವರಣದಲ್ಲಿ ಚಾಲನೆಯನ್ನು ನೀಡಿದರು. ಹಾಗೆಯೇ ಈ ಜಾಥವು ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಕೆಜಿ ಬೋಪಯ್ಯನವರ ಸಮ್ಮುಖದಲ್ಲಿ ಸಮಾರೋಪಗೊಂಡಿತು.

ಈ ಬೈಕ್ ಜಾಥಾವು ಮಡಿಕೇರಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ಕಾಂಗೀರ ಸತೀಶ್(ಅಶ್ವಿ) ಅವರ ಮುಂದಾಳತ್ವದಲ್ಲಿ ನಡೆಯಿತು. ಈ ಜಾಥಾದಲ್ಲಿ ಸುಮಾರು 150ಕ್ಕೂ ಅಧಿಕ ಬೈಕುಗಳೊಂದಿಗೆ ಭಾರತಮಾತೆಗೆ ಜೈಕಾರವನ್ನು ಕೂಗುತ್ತಾ ಈ ಭಾಗದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿತು. ಈ ಸಂದರ್ಭದಲ್ಲಿ ಮಡಿಕೇರಿ ಬಿಜೆಪಿ ಗ್ರಾಮಾಂತರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಕೋಡಿರ ಪ್ರಸನ್ನ, ಮಂಡಲ ಕಾರ್ಯದರ್ಶಿಗಳಾದ ಮನು ಮಹೇಶ್, ನಾಪೋಕ್ಲೂ ಶಕ್ತಿ ‌ಕೇಂದ್ರದ ಪ್ರಮುಖ್ ರಾದ ಅಂಬಿ ಕಾರ್ಯಪ್ಪ, ಜಿಲ್ಲಾ ಸಮಿತಿ ಸದಸ್ಯರಾದ ಮುಂಡೋಳಂಡ ರಮೇಶ್ ಮುದ್ದಯ್ಯ, ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷರಾದ ಹರೀಶ್ ಪೂವಯ್ಯ, ರೈತ ಮೋರ್ಚಾದ ಅಧ್ಯಕ್ಷರಾದ ಶಿವಚಾಳಿಯಂಡ ಜಗದೀಶ್, ಮಡಿಕೇರಿ ತಾಲೂಕು ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾದ ಗಿರೀಶ್, ಮಡಿಕೇರಿ ತಾಲೂಕು ಗ್ರಾಮಾಂತರ ಯುವ ಮೋರ್ಚಾದ ಅಧ್ಯಕ್ಷರಾದ ಹೇಮಂತ್ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಚೇತನ್ ಬಂಗೇರ , ಜಿಲ್ಲಾ ಯುವ ಮೋರ್ಚಾದ ಉಪಾಧ್ಯಕ್ಷರಾದ ಪವನ್ ತೋಟಂಬೈಲ್ ಹಾಗೂ ಈ ಭಾಗದ ಶಕ್ತಿ ಕೇಂದ್ರ ಯುವಮೋರ್ಚಾದ ಅಧ್ಯಕ್ಷರು,ಯುವಮೋರ್ಚಾ ಮಂಡಲ ಸಮಿತಿ ಸದಸ್ಯರುಗಳು , ವಿವಿಧ ಶಕ್ತಿ ಕೇಂದ್ರಗಳ ಪ್ರಮುಖರು, ಬೂತ್ ‌ಅಧ್ಯಕ್ಷರು ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!