ಆಚರಣೆ ಗಮ್ಮತ್ತಿರ್ಲಿ, ವಿಷಯ ಗೊತ್ತಿರ್ಲಿ..

✍🏻ವಿನೋದ್ ಮೂಡಗದ್ದೆ,

ಕೊಡಗ್’ನ ಎಲ್ಲಾ ರೈತಾಪಿ ಜನಗ ಕೈಲು ಮೂರ್ತ ಹಬ್ಬದ ಗೌಜಿ ಲಿ ಒಳೊ. ಸೋಣ ೧೨ ರ್ಂದ ೧೮ ರ ಮುಟ್ಟ ಅಲ್ಲಲ್ಲಿ ಹಬ್ಬ ಮಾಡುವೆ‌. ಸುರುಗೆ ಗಾಳಿಬೀಡು ಕಡೆಲಿ ಹಬ್ಬ ಸುರು ಆಗಿ ಸೋಣ ೧೬ ಕೆ ಭಾಗಮಂಡಲ ಕಡೆ ಆಚರಣೆ ಮಾಡುವೆ. ಸೋಣ ೧೮ ತೇಳ್ರೆ ಸೆಪ್ಟೆಂಬರ್ ೩ ರಂದ್ ಸಾರ್ವತ್ರಿಕವಾಗಿ ಇಡೀ ಕೊಡಗ್ ಲಿ ಆಚರಣೆ ಮಾಡುವೆ.

ಪಂಡ್ ನ ಕಾಲಲಿ ಎಲ್ಲವೂ ಕೃಷಿ ಚಟುವಟಿಕೆಲಿ ತೊಡಗಿಸಿಕಂಡ್ ಇದ್ದವ್, ಆಗ ಆಚೆ ಈಚೆ ಮನೆವ್ ಸೇರಿ ಕೂಡ್ ನಾಟಿ ಮಾಡುವ ಪದ್ದತಿ ಸ ಇತ್ತ್. ಕೃಷಿ ಕೆಲ್ಸ ಆದಂಗೆ ಊರವ್ ಎಲ್ಲ ಸೇರಿ ಕೃಷಿ ಉಪಕರಣಗ ಹಂಗೆ ಆಯುಧಗಳ ಇಸಿ ಪೂಜೆ ಮಾಡಿ ಕಡೆಗೆ ಎಲ್ಲವೂ ಗಮ್ಮತ್ತ್ ಮಾಡ್ತಾ ಇದ್ದೊ.

ಕಾಲ ಬದಲಾದಂಗೆ ಕೃಷಿ ಇಂದ್ ಯಾರಿಗೂ ಬೇಡದಾವ್ಟು. ಅದರ್ಲೂ ಭತ್ತದ ಕೃಷಿ ಅಂತೂ ಅಲ್ಲೊಂದು ಇಲ್ಲೊಂದು ತೇಳುವಂಗೆ ಆವ್ಟು. ಕೆಲವ್ ಕಡೆ ಗದ್ದೆಗ ಪಾಳ್ ಬಿದ್ದಿದರೆ ಇನ್ನ್ ಕೆಲವ್ ಕಡೆ ಅಡಿಕೆ, ಕಾಫಿ ತೋಟಗ ಆವ್ಟು.

ಹಿಂಗಿರ್ಕಾಕನ ಆಗಿನ ಆಚರಣೆಗ ಈಗಿನ ಕಾಲಕೆ ಅಪ್ರಸ್ತುತ ಆಗಿ ಕಂಡದೆ ಮತ್ತೆ ಮನೆಲಿ ಹಿರಿಯರ್ ಸ ಹಬ್ಬ ಹರಿದಿನದ ಮಹತ್ವ, ಆಚರಣೆನ ಈಗಿನ ಪೀಳಿಗೆಗೆ ತಿಳ್ಸಿಕೊಡುವ ಕಾರ್ಯ ಮಾಡೊಕು.

ಇತ್ತೀಚೆನ ವರ್ಷಗಳ್ಲಿ ಕೈಲುಮೂರ್ತ ಹಬ್ಬ ತೇಳ್ರೆ ಬರೇ ಕುಡ್ದ್ ತಿಂಬದು ತ ನೇ ಆವ್ಟು. ಯಾರ ಫೇಸ್’ಬುಕ್, ವಾಟ್ಸಾಪ್ ಲಿ ನೋಡ್ರೂ ಹಂದಿ ಹೊಡಿಯದು, ಕಳ್ಳ್ ಕುಪ್ಪಿನ ಚಿತ್ರಗ ಬುಟ್ಟರೆ. ಮೂಲ ಆಚರಣೆ ಬಗ್ಗೆ ಯಾರಿಗೂ ಬೇಕಿಲ್ಲೆ. ಇದ್ ಕೈಲುಮೂರ್ತ ಕೆ ಮಾತ್ರ ಅಲ್ಲ‌. ಎಲ್ಲ ಹಬ್ಬಗಳ್ಲಿ ಸ ಹಿಂಗೆನೆ.

ಕಿರಿಯರ್ ತಿಳ್ಕಂಬ ಪ್ರಯತ್ನ ಮಾಡೊಕು, ಹಿರಿಯರ್ ತಿಳ್ಸಿಕೊಡೊಕು. ಆಗ ಮಾತ್ರ ನಮ್ಮ ಆಚಾರ ವಿಚಾರಗ ಇನ್ನಷ್ಟ್ ಕಾಲ ಅಳಿಯದೇ ಉಳ್ದದೆ.

✍🏻ವಿನೋದ್ ಮೂಡಗದ್ದೆ

error: Content is protected !!