ಆಗಸ್ಟ್ 24ರಿಂದ ಕೊಡಗಿನಲ್ಲಿ ನಿಷೇಧಾಜ್ಞೆ: ಜಿಲ್ಲಾಡಳಿತ ಆದೇಶ

ಪ್ರತಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಕರೆ ನೀಡಿರುವ ಮಡಿಕೇರಿ ಚಲೋ ಮತ್ತು ಬಿಜೆಪಿಯಿಂದ ಗಾಂಧಿ ಮೈದಾನ ದಲ್ಲಿ ಆಯೋಜಿಸಿರುವ ಜನಾಜಾಗೃತಿ ಸಮಾವೇಶದ ಹಿನ್ನಲೆಯಲ್ಲಿ ಆಗಸ್ಟ್ 24ರಿಂದ ಜಿಲ್ಲಾಡಳಿತ 27ನೇ ತಾರೀಖಿನಂದು ಮೂರು ದಿನಗಳ ನಿಷೇಧಾಜ್ಞೆಯನ್ನು ಜಿಲ್ಲಾಡಳಿತ ಆದೇಶಿಸಿದೆ.

ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅಧಿಕೃತ ಆದೇಶ ಹೊರಡಿಸಿದ್ದು ಉಭಯ ಪಕ್ಷದ ನಿರ್ಧಾರ ಬಗ್ಗೆ ಕಾದುನೋಡಬೇಕಾಗಿದೆ. ಸಿದ್ದರಾಮಯ್ಯ ಕಾರಿನ ಮೇಲಿನ ಮೊಟ್ಟೆ ಎಸೆತ ಮತ್ತು ಮಾಂಸ ತಿಂದು ದೇವಸ್ಥಾನ ಭೇಟಿ ವಿವಾದ ಮುಂದೆ ಯಾವೆಲ್ಲಾ ಘಟನೆಗಳಿಗೆ ಎಡೆಮಾಡಿಕೊಡಲಿದೆ ಎಂದು ನೋಡಬೇಕಿದೆ. ನಿಷೇಧಾಜ್ಞೆ ಹಿನ್ನಲೆಯಲ್ಲಿ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಕ್ಕೆ ತಡೆ ನೀಡಲಾಗಿದೆ.

error: Content is protected !!