ಆಂಗಿಕ ಮಲ್ಟಿಮೀಡಿಯಾ ಮತ್ತು ವಿವಿಧ ಸಾಂಸ್ಕೃತಿಕ ಸಂಸ್ಥೆ ಗಳ ಸಹಯೋಗದಲ್ಲಿ ಆನ್ಲೈನ್ ನಲ್ಲಿ “ಕಾನ್ಪೀಡೆನ್ಸ್ ಸಿರೀಸ್”
ಆಂಗಿಕ ಮಲ್ಟಿಮೀಡಿಯಾ ಮತ್ತು ವಿವಿದ ಸಾಂಸ್ಕೃತಿಕ ಸಂಸ್ಥೆ ಗಳ ಸಹಯೋಗದಲ್ಲಿ ಆನ್ಲೈನ್ ನಲ್ಲಿ “ಕಾನ್ಪೀಡೆನ್ಸ್ ಸಿರೀಸ್” ಮೂಲಕ ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸ ಮಾಲಿಕೆ ಹಾಗು ಸೃಜನಾತ್ಮಕ ಕಲಿಕಾ ಶಿಬಿರಗಳನ್ನು ಏರ್ಪಡಿಸಲಾಗಿದೆ.
ದಿನಾಂಕ 27- 5-2021 ಗುರುವಾರ ದಿಂದ 31-5-2021 ರ ತನಕ ಪ್ರತೀದಿನ ಸಂಜೆ 6.30 ಕ್ಕೆ ಆರಂಭವಾಗುವ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲಗಳ ವ್ಯಕ್ತಿಗಳಾಗಿ ಶ್ರೀಯುತ ಬಾಸುಮ ಕೊಡಗು, ಡಾ.ಚಂದ್ರಶೇಖರ ದಾಮ್ಲೆ.ಡಾ.ಸುಂದರ್ ಕೇನಾಜೆ ಹಾಗು ಡಾ.ಕುಶ್ವಂತ್ ಕೋಳಿಬೈಲ್ ಹಾಗು ಡಾ. ಕಿರಣ್ ಕುಮಾರ್ ಗಾನಸಿರಿ ಇವರು ಸಂಪನ್ಮೂಲಗಳ ವ್ಯಕ್ತಿ ಗಳಾಗಿ ಭಾಗವಹಿಸುತ್ತಾರೆ.
ಶಿಭಿರದ ಆರಂಭದಲ್ಲಿ ಗೂಗಲ್ ಮೀಟ್ ಮತ್ತು ವಾಟ್ಸಪ್ ಮೂಲಕ ವಿದ್ಯಾರ್ಥಿಗಳಿಗೆ ರಂಗತರಬೇತಿ,ಕ್ರಿಯೇಟಿವ್ ಆರ್ಟ್ ಮತ್ತು ಶಾಸ್ತ್ರೀಯ ನೃತ್ಯ ತರಗತಿಗಳು ನಡೆಯುತ್ತದೆ. ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ’ ಕಾನ್ಫಿಡೆನ್ಸ್ ಸಿರೀಸ್ ನ ಪ್ರಯೋಜನ ಪಡೆದುಕೊಳ್ಳಬೇಕೆಂದು ಆಯೋಜಕರು ತಿಳಿಸಿದ್ದಾರೆ.