fbpx

ಅ.7 ರಿಂದ 17ರವರೆಗೆ ಪ್ರವಾಸಿ ತಾಣಗಳು ಬಂದ್: ಜಿಲ್ಲಾಡಳಿತದ ಆದೇಶ

ಅ.17ರ ಕಾವೇರಿ ತೀರ್ಥೋದ್ಬವದವರೆಗೆ ಮಡಿಕೇರಿ ನಗರ ವ್ಯಾಪ್ತಿಯ ಪ್ರವಾಸಿ ತಾಣಗಳನ್ನು ಬಂದ್ ಮಾಡಿ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಆದೇಶ ಹೊರಡಿಸಿದ್ದಾರೆ

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿಗಳು ಮಡಿಕೇರಿಯ ರಾಜಾಸೀಟ್, ಜನರಲ್ ತಿಮ್ಮಯ್ಯ ಮ್ಯೂಸಿಯಂ, ಗದ್ದಿಗೆ, ಕೋಟೆ, ನೆಹರು ಮಂಟಪಗಳಿಗೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶವನ್ನು ಅ.7ರಿಂದ 17ವರೆಗೆ ನಿಷೇಧಿಸಿದ್ದಾರೆ.
ಇನ್ನು ಕರಗ ಪೂಜೆಯಲ್ಲಿ ಪಾಲ್ಗೊಳ್ಳಲು 25 ಮಂದಿಗೆ ಅವಕಾಶ ನೀಡಿದ್ದು, ಪ್ರತಿಯೊಬ್ಬರು ಕನಿಷ್ಟ 1 ಡೋಸ್ ಲಸಿಕೆ ಮತ್ತು 72 ಗಂಟೆಗಳ ಮುನ್ನಾ ಕೋವಿಡ್ ನೆಗೆಟೀವ್ ವರದಿ ಹೊಂದಿರಬೇಕು. ಕರಗಗಳ ಜೊತೆ ಮನೆ ಮನೆಗೆ ತೆರಳುವವರು ಕೂಡ ಈ ಸೂಚನೆಯನ್ನು ಅನುಸರಿಸುವಂತೆ ತಿಳಿಸಿದ್ದಾರೆ. ದೇವಾಲಯಗಳ ಒಳಗೆ ಧಾರ್ಮಿಕ ಪೂಜಾ ಕಾರ್ಯಗಳನ್ನು ನಡೆಸಬಹುದು ಎಂದು ತಿಳಿಸಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಮನರಂಜನಾ ಕಾರ್ಯಕ್ರಮಗಳಿಗೆ ಯಾವುದೇ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

error: Content is protected !!