ಅಸ್ಸಾಂ ಕಾರ್ಮಿಕರ ನುಸುಳುವ ಯತ್ನ: 50 ಮಂದಿ ವಶಕ್ಕೆ

ಕೊಡಗಿನ ನೆಲ್ಯುದಿಕೇರಿ,ಸಿದ್ದಾಪುರ,ಸುಂಟಿಕೊಪ್ಪ ಮತ್ತು ಮಡಿಕೇರಿಯಲ್ಲಿ ಕೆಲಸ ಮಾಡಲು ಅಸ್ಸಾಂನ ಗುವಹಾಟಿಯಿಂದ ಹೆಂಗಸರು ಮಕ್ಕಳು ಸೇರಿದಂತೆ 50 ಮಂದಿಗೆ ಕೊಡಗು ಮೈಸೂರು ಗಡಿ ಕೊಪ್ಪ ಗಡಿಯಲ್ಲಿ ತಡೆವೊಡ್ಡಿರುವ ಘಟನೆ ನಡೆದಿದೆ.

ನೆಲ್ಯಹುದಿಕೇರಿಯಲ್ಲಿ ಇಟ್ಟಿಗೆ ಕೆಲಸ,ಸಿದ್ದಾಪುರ ಮತ್ತು ಸುಂಟಿಕೊಪ್ಪದ ಸ್ಯಾಂಡಲ್ ವುಡ್ ಎಸ್ಟೇಟ್ ಗೆ ಗುವಹಾಟಿಯಿಂದ ರೈಲಿನಿಂದ ಟರೆತಂದು,ಬಳಿಕ ಬೆಂಗಳೂರಿನಿಂದ ಬಸ್ ಮೂಲಕ ಆಗಮಿಸಿ ಕೊಪ್ಪಗೇಟಿನಲ್ಲಿ ಸಿಕ್ಕಿಬಿದ್ದಿದ್ದಾರೆ.ತಪಾಸಣೆ ನಡೆಸುವ ವೇಳೆ ಬಸ್ ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದಾನೆ.ಕಾರ್ಮಿಕರನ್ನು ಕರೆತಂದ ವ್ಯಕ್ತಿಯ ಪ್ರಕಾರ ಇವರು ಕಳೆದ 10 ವರ್ಷಗಳಿಂದ ಜಿಲ್ಲೆಯಲ್ಲಿದ್ದು,ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದರಲ್ಲದೆ ಸರಕಾರಿ ಸೌಲಭ್ಯ ಸಿಗದ ಕಾರಣ ಮೂದಲ ಅಲೆ ಸಂದರ್ಭ ವಲಸೆ ಹೋದವರು,ಇದೀಗ ಆಧಾರ್ ದಾಖಲೆ ಸಮೇತ ಮತ್ತೆ ವಾಪ್ಸಾಗಿದ್ದಾರೆ. ಲಾಕ್ಡೌನ್ ಹಿನ್ನಲೆ ಊಟ,ನೀರು ಆಶ್ರಯ ವಿಲ್ಲದೆ ಪರದಾಡುತ್ತಿದ್ದದನ್ನು ಕಂಡು ಸ್ಥಳೀಯ ಹೋಟೆಲ್ ಉದ್ಯಮಿಯೊಬ್ಬರು ನೆರವಿಗೆ ಬಂದಿದ್ದಾರೆ.