ಅಸ್ಸಾಂ ಕಾರ್ಮಿಕರಿಂದ ಗೋಮಾಂಸ ಮಾರಾಟ: ಇಬ್ಬರ ಬಂಧನ

ಕಾಫಿ ತೋಟದಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದ ಇಬ್ಬರು ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.

ನಾಪೋಕ್ಲು ಸಂತೆದಿನ ನಸುಕಿನ ಜಾವದಲ್ಲಿ ಚೋನಕೆರೆ ಎಂಬಲ್ಲಿ ಸಂಶಯಾಸ್ಪದವಾಗಿ ಬ್ಯಾಗು ಹಿಡಿದುಕೊಂಡು ಹೋಗುತ್ತಿದ್ದವರನ್ನು ವಿಚಾರಿಸಿದಾಗ ಸಂದರ್ಭ ಗೋಮಾಂಸ ಇರುವುದು ಖಚಿತಗೊಂಡು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿನ ಚೋನಕೆರೆಯ ಚೇಂಬು ನಾಸಿಕ್ ಹಾಗು ಮೂವರ ಬೆಳ್ಳಿಯಪ್ಪ ಎಂಬುವವರ ಲೈನ್ ಮನೆಯಲ್ಲಿ ವಾಸವಿದ್ದರು. ಬಂಧಿತ ಆರೋಪಿಗಳು ಅಸ್ಸಾಮಿನ ಉದಲ್ ಗಿರಿ ನಿವಾಸಿಯಾದ ಸಹಜಾನ್ ಅಲಿ, ಸೈದಲ್ ಇಸ್ಲಾಂ ಆಗಿದ್ದು, ಬಂಧಿತರಿಂದ 12 ಕೆ.ಜಿ ಮಾಂಸ ಮತ್ತು ಚರ್ಮ ವನ್ನು ವಶಕ್ಕೆ ಪಡೆದಿದ್ದಾರೆ.