ಅವ್ಯವಸ್ಥೆಗಳ ಆಗರ ಮಡಿಕೇರಿ ಖಾಸಗಿ ಬಸ್ ನಿಲ್ದಾಣದ ಶೌಚಾಲಯ

ಮಡಿಕೇರಿ ಫೆಬ್ರವರಿ 28: ಮಂಜಿನ ನಗರಿಯಲ್ಲಿ ಹೊಸದಾಗಿ ನಿರ್ಮಾಣಗೊಂಡು ಶೋಭಿಸುತ್ತಿರುವ ಖಾಸಗಿ ಬಸ್ ನಿಲ್ದಾಣದಲ್ಲಿ ನಿರ್ಮಾಣವಾದ ಶೌಚಾಲಯವೂ ಹಲವಾರು ಅವ್ಯವಸ್ಥೆಗಳಿಂದ ಕೂಡಿದೆ.

ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಸರಿಯಾಗಿದ್ದರೂ ಸಹ ಶುಚಿತ್ವವೂ ಮಾರುದೂರ ನಿಂತಿದೆ.. ಬಳಸುವವರು ಸಮರ್ಪಕವಾಗಿ ನೀರು ಬಳಸದೇ ಇರುವುದು ಅಶುಚಿತ್ವಕ್ಕೆ ಮತ್ತೊಂದು ಕಾರಣ ಎನ್ನಬಹುದು.

ಮಡಿಕೇರಿ ನಗರ ಸಭೆಯ ನಿವೃತ್ತ ನೌಕರ ರಾಜು ಎಂಬುವವರು ಇಲ್ಲಿ ಪ್ರಸ್ತುತ ಸ್ವಚ್ಛತೆಯನ್ನು ನೋಡಿಕೊಳ್ಳುತ್ತಿದ್ದು, ಈ ಹಿಂದೆ ಸ್ವಚ್ಛತೆ ಕಾರ್ಯ ಮಾಡುತಿದ್ದವರು ಸರಿಯಾಗಿ ಕಾರ್ಯ ನಿರ್ವಹಿಸದ ಕಾರಣ ಟೈಲ್ಸ್ ನಲ್ಲಿ ಕೊಳೆ ಇದ್ದು ಆಸಿಡ್ ಹಾಕಿ ತೊಳೆದರೆ ಹೋಗುತ್ತದೆ. ಕೆಲವು ಬೇಸಿನ್ ಗಳಿಗೆ ವ್ಯವಸ್ಥೆ ಮಾಡಲಾಗಿದ್ದು ಕೆಲವೇ ದಿನಗಳಲ್ಲಿ ಅದರ ವ್ಯವಸ್ಥೆ ಮಾಡಿಸಲಾಗುತ್ತದೆ. ಕೆಲವು ಬಾರಿ ಬೀಗ ವೂ ಕಳುವಾಗಿದೆ. ರಾತ್ರಿ ಬೆಳಕಿನ ವ್ಯವಸ್ಥೆ ಇಲ್ಲಾ, ಆದ್ದರಿಂದ ಆದಷ್ಟು ಬೇಗ ಬೆಳಕಿನ ವ್ಯವಸ್ಥೆ ಮಾಡಲಾಗುತ್ತದೆ ಇದರೊಂದಿಗೆ ಸಾರ್ವಜನಿಕರು ಸಹ ಸ್ವಚ್ಛತೆಗೆ ಸಹಕರಿಸಬೇಕು ಎಂದು ಅಭಿಪ್ರಾಯ ಪಟ್ಟರು..

ವರದಿ : ಪ್ರತೀಕ್ ಪರಿವಾರ ಮರಗೋಡು

error: Content is protected !!