fbpx

ಅರ್ಥಪೂರ್ಣವಾಗಿ ನಡೆದ ಜನಾಶೀರ್ವಾದ ಯಾತ್ರೆ ಸಭಾ ಕಾರ್ಯಕ್ರಮ

ಜನಾಶೀರ್ವಾದ ಯಾತ್ರೆ ಕೊಡಗು ಜಿಲ್ಲೆಯ ಮಡಿಕೇರಿ ನಗರದ ಕ್ರಿಸ್ಟಲ್ ಹಾಲ್ ನಲ್ಲಿ ಹಮ್ಮಿಕೊಂಡಿದ್ದ ಸಭಾ ಕಾರ್ಯಕ್ರಮಕ್ಕೆ ಕೊಡಗು ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳ ಪೂರ್ಣ ಕುಂಭ ಕಳಶದೊಂದಿಗೆ ಜನಾಶೀರ್ವಾದ ಯಾತ್ರೆಗೆ ಆಗಮಿಸಿದ ಗಣ್ಯರಿಗೆ ಭವ್ಯ ಸ್ವಾಗತ ಕೋರಿದರು.ಜನಾಶೀರ್ವಾದ ಪಡೆಯಲು ಆಗಮಿಸಿದ ನೂತನ ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಮಾನ್ಯ ಶ್ರೀ ರಾಜೀವ್ ಚಂದ್ರಶೇಖರ್ ಸಭೆಯನ್ನು ಉದ್ಘಾಟಿಸಿ, ಪುಷ್ಪಾರ್ಚನೆ ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದರು .

ಕಾರ್ಯಕ್ರಮದಲ್ಲಿ ಕೊಡಗು ಮೈಸೂರು ಸಂಸದರಾದ ಮಾನ್ಯ ಪ್ರತಾಪ್ ಸಿಂಹ, ಬಿಜೆಪಿ ಕೊಡಗು ಜಿಲ್ಲಾಧ್ಯಕ್ಷರಾದ ಶ್ರೀ ರಾಬಿನ್ ದೇವಯ್ಯ,ಮಡಿಕೇರಿ ಶಾಸಕರಾದ ಶ್ರೀ ಮಾನ್ಯ ಅಪ್ಪಚ್ಚು ರಂಜನ್,ವಿರಾಜಪೇಟೆ ಶಾಸಕರಾದ ಶ್ರೀ ಮಾನ್ಯ ಕೆ.ಜಿ.ಬೋಪಯ್ಯ,ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಪುತ್ತೂರು ಶಾಸಕರು ಹಾಗೂ ಜನಾಶೀರ್ವಾದ ಯಾತ್ರೆ ಸಂಚಾಲಕರಾದ ಶ್ರೀ ಮಾನ್ಯ ಸಂಜೀವ ಮಠಂದೂರು,ಬಿಜೆಪಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಜನಾಶೀರ್ವಾದ ಯಾತ್ರೆ ಸಹ ಸಂಚಾಲಕರಾದ ಕೇಶವಪ್ರಸಾದ್, ಮುಖಂಡರಾದ ಬಿ ಬಿ ಭಾರತೀಶ್, ರವಿಕುಶಾಲಪ್ಪ, ಎಸ್ ಜಿ ಮೇದಪ್ಪ ಮತ್ತು ಕೊಡಗು ಜಿಲ್ಲೆಯ ಜನಪ್ರತಿನಿಧಿಗಳು,ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಮತ್ತು ಕಾರ್ಯಕರ್ತರು ಕಾರ್ಯಕ್ರಮದದಲ್ಲಿ ಭಾಗವಹಿಸಿದರು.

error: Content is protected !!