ಅರೆಭಾಷೆ ವಿವಿಧ ಸ್ಪರ್ಧೆಗಳ ವಿಜೇತರ ಪಟ್ಟಿ ಪ್ರಕಟ

ಅರೆಭಾಷೆ ಲಲಿತ ಪ್ರಬಂಧ ವಿಜೇತರ ಪಟ್ಟಿ ಪ್ರಕಟ

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಅರೆಭಾಷೆ ಲಲಿತ ಪ್ರಬಂಧ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿದ್ದು, ವಿಜೇತರ ಪಟ್ಟಿ ಪ್ರಕಟಿಸಲಾಗಿದೆ.
ವಿಜೇತರ ಹೆಸರು: ಲೀಲಾ ದಾಮೋದರ ಅವರ ಪ್ರಬಂಧ ಇಂಚು(ಪ್ರಥಮ), ಕೊಟ್ಟಕೇರಿಯನ ಲೀಲಾ ದಯಾನಂದ ಅವರ ನಮ್ಮ ಕಾಲ್ ಮೇಲೆ ನಾವ್ ನಿಲ್ಲೊಕು ಪ್ರಬಂಧಕ್ಕೆ (ದ್ವಿತೀಯ), ಜಿ.ವಿಶ್ವನಾಥ್ ಎಡಿಕೇರಿ ಅವರ ನಂಜನ ಹನಿಮೂನ್ ಪ್ರಬಂಧಕ್ಕೆ (ತೃತೀಯ) ಸ್ಥಾನ ಪಡೆದಿದ್ದಾರೆ ಎಂದು ಕರ್ನಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಅವರು ತಿಳಿಸಿದ್ದಾರೆ.

ಅರೆಭಾಷೆ ಕಥೆ ಮತ್ತು ಕವಿತೆ ವಿಜೇತರ ಪಟ್ಟಿ ಪ್ರಕಟ

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ಅರೆಭಾಷೆ ಕಥೆ ಮತ್ತು ಕವಿತೆ ಸ್ಪರ್ಧೆಯ ವಿಜೇತರನ್ನು ಆಯ್ಕೆ ಮಾಡಿದ್ದು, ವಿಜೇತರ ಹೆಸರನ್ನು ಪ್ರಕಟಿಸಿದೆ.
ಅರೆಭಾಷೆ ಕಥೆ ಸ್ಪರ್ಧೆ ವಿಜೇತರು: ಕಾಲ್ ದಾರಿಲಿ ಹೆಜ್ಜೆ ಮೂಡಿಕನ ಕಥೆಗೆ ಕುಕ್ಕುನೂರು ರೇಷ್ಮ ಮನೋಜ್(ಪ್ರಥಮ), ಬದ್ಕಿಗೆ ಅರ್ಥ ಬಾಕನ ಕಥೆಗೆ ವಿಶ್ವನಾಥ್ ಎಡಿಕೇರಿ.ಜಿ(ದ್ವಿತೀಯ), ಸಿಟ್ಟೆನೂ ಇಲ್ಲೆ ಸೀತೆಗೆ ಲೀಲಾ ದಾಮೋದರ ಅವರ ಕಥೆಗೆ(ತೃತೀಯ), ಚಾಮಿಯಜ್ಜನ ಹೂಂಜ ಬ್ಯಾಟೆ ಕಥೆಗೆ ಮೂವನ ಲಿಖಿತ ಎಸ್.(ತೃತೀಯ) ಸ್ಥಾನ ಪಡೆದಿದ್ದಾರೆ.

ಅರೆಭಾಷೆ ಕವನ ಸ್ಪರ್ಧೆ ವಿಜೇತರು: ಗಾಂಧಾರಿಗಳ ನಾಡ್‍ಲಿ ಕವನ ಶೀರ್ಷಿಕೆಗೆ ವಿಶ್ವನಾಥ್ ಎಡಿಕೇರಿ ಜಿ.(ಪ್ರಥಮ), ಆಪತ್ತಿಗಾದಂವ ಕವನಕ್ಕೆ ಕೊಟ್ಟಕೇರಿಯನ ಲೀಲಾ ದಯಾನಂದ(ದ್ವಿತೀಯ), ಹೊಸ್ತೊಂದು ಉಂಬಕಾಯ್ತ್ ಕವನಕ್ಕೆ ಜೀವನ್ ಪುರ(ತೃತೀಯ), ಸಂಸಾರದ ಹಣತೆ ಕವನಕ್ಕೆ ಶಿವದೇವಿ ಅವನೀಶ್‍ಚಂದ್ರ(ತೃತೀಯ) ಸ್ಥಾನ ಪಡೆದಿದ್ದಾರೆ ಎಂದು ರಿಜಿಸ್ಟ್ರಾರ್ ಅವರು ತಿಳಿಸಿದ್ದಾರೆ.

error: Content is protected !!