fbpx

ಅರೆಭಾಷೆ ಪದಕೋಶ ಬಿಡುಗಡೆ-ಬಹುತ್ವ ಸಂಸ್ಕೃತಿ ಮತ್ತು ಭಾಷೆ ಉಳಿಸಿ ಬೆಳೆಸುವಂತಾಗಬೇಕು: ತಾಳ್ತಜೆ ವಸಂತ ಕುಮಾರ್

ಆಧುನಿಕತೆಯಲ್ಲಿ ಬಹುತ್ವ ಸಂಸ್ಕøತಿ ಮತ್ತು ಭಾಷೆಯನ್ನು ಉಳಿಸಿ ಬೆಳೆಸುವಂತಾಗಬೇಕು. ಆ ನಿಟ್ಟಿನಲ್ಲಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯಿಂದ ಹೊರತಂದಿರುವ ‘ಅರೆಭಾಷೆ ಪದಕೋಶ’ ಹೊತ್ತಿಗೆಯು ಮುಂದಿನ ಜನಾಂಗಕ್ಕೆ ಉಪಯುಕ್ತವಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕರಾದ ತಾಳ್ತಜೆ ವಸಂತ ಕುಮಾರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹೊರತಲಾಗಿರುವ ಅರೆಭಾಷೆ ಪದಕೋಶ(ಅರೆಭಾಷೆ-ಕನ್ನಡ- ಇಂಗ್ಲೀಷ್) ಪುಸ್ತಕವನ್ನು ಭತ್ತದ ರಾಶಿಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಭಾರತವು ಭಾಷಾ ವೈವಿದ್ಯತೆಯನ್ನು ಹೊಂದಿರುವ ರಾಷ್ಟ್ರವಾಗಿದೆ. ಹಲವು ಪ್ರಾಂತ್ಯ, ಪ್ರದೇಶಗಳ ವೈವಿದ್ಯತೆಯನ್ನು ಒಳಗೊಂಡಿದೆ. ಆ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿ ಅರೆಭಾಷೆ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಭಾಷೆ ಉಳಿದಲ್ಲಿ ಜನಾಂಗವು ಸಹ ಉಳಿಯಲು ಸಾಧ್ಯ ಎಂದರು.
ಕನ್ನಡ ಉಪ ಭಾಷೆಗಳನ್ನು ಉಳಿಸಿ ಬೆಳೆಸುವಲ್ಲಿ ಸರ್ಕಾರವು ಸಹ ಅಕಾಡೆಮಿ ಮೂಲಕ ಹಲವು ಪ್ರಯತ್ನಗಳನ್ನು ಮಾಡುತ್ತಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಅಕಾಡೆಮಿ ಮೂಲಕ ಪದಕೋಶವನ್ನು ಹೊರತಂದಿರುವುದು ಶ್ಲಾಘನಿಯ. ಅಪೂರ್ವ ಕೃತಿಗಳು, ಭಾಷಾ ಉಲ್ಲೇಖಗಳು, ಐತಿಹಾಸಿಕ ದಾಖಲೆಗಳು, ಅರೆಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದರು.

‘ಕನ್ನಡ ಉಪ ಭಾಷೆಗಳು ಕೂಡ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದೆ. ಆದ್ದರಿಂದ ಸಾಂಸ್ಕøತಿಕ ಭಾಷಾ ಅಸ್ಮಿತೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಬೇಕು. ಆಚರಣೆ, ಆರಾಧನೆ, ಭಾವನೆಗಳು ವಿಭಿನ್ನವಾಗಿದ್ದರೂ ಸಹ, ಮೂಲ ಭಾಷಾ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಪ್ರಯತ್ನಿಸಬೇಕಿದೆ ಎಂದು ತಾಳ್ತಜೆ ವಸಂತ ಕುಮಾರ್ ಅವರು ನುಡಿದರು.’

ಭಾಷಾ ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಹೆಸರು ಮಾಡಿರುವ ಕೋಡಿ ಕುಶಾಲಪ್ಪ ಗೌಡರು ಅರೆಭಾಷೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.
ಅರೆಭಾಷೆ ಪದಕೋಶದಲ್ಲಿ ಪ್ರಮುಖವಾಗಿ ಸ್ಥಳ ನಾಮದ ವಿಶೇಷತೆ ಕಾಣಬಹುದಾಗಿದೆ. ಪದಕೋಶ ಸಂಗ್ರಹವು ನಿರಂತರವಾಗಿ ನಡೆಯಬೇಕು. ಹಾಗೆ ಆದಲ್ಲಿ ಭಾಷೆಯನ್ನು ಉಳಿಸಿ ಬೆಳೆಸಲು ಸಾಧ್ಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಅಕಾಡೆಮಿ ಕೆಲಸಗಳು ದಾಖಲೆ ಮೂಲಕ ಮಾತನಾಡುತ್ತಿವೆ. ಆ ನಿಟ್ಟಿನಲ್ಲಿ ಅರೆಭಾಷೆ ಪದಕೋಶ, ಪಾರಂಪರಿಕ ವಸ್ತುಕೋಶ ಹೀಗೆ ಹಲವು ಪುಸ್ತಕಗಳನ್ನು ಹೊರತಂದಿರುವುದು ಮೆಚ್ಚುವಂತದ್ದು ಎಂದು ವಿಶ್ರಾಂತ ಪ್ರಾಧ್ಯಾಪಕರು ಹೇಳಿದರು.

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ ಅವರು ಮಾತನಾಡಿ ಅಕಾಡೆಮಿ ಮೂಲಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದಂತೆ ಹಲವು ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಪದಕೋಶವು ಮಹತ್ವದ ಕಾರ್ಯವಾಗಿದೆ ಎಂದು ಅವರು ಬಣ್ಣಿಸಿದರು.

ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷರಾದ ಹೊಸೂರು ರಮೇಶ್ ಜೋಯಪ್ಪ ಅವರು ಮಾತನಾಡಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಉಳಿಯಬೇಕಾದರೆ ದಾಖಲೆಗಳು ಅಗತ್ಯ. ಆ ನಿಟ್ಟಿನಲ್ಲಿ ಅಕಾಡಮಿ ವತಿಯಿಂದ ಹಲವು ಪ್ರಮುಖ ಪುಸ್ತಕಗಳನ್ನು ಪ್ರಕಟಿಸಿರುವುದು ಶ್ಲಾಘನೀಯ ಎಂದರು.

ಅರೆಭಾಷೆ ಪದಕೋಶ ಕಾರ್ಯವು ಮಹತ್ತರವಾಗಿದೆ. ಮಕ್ಕಳಿಗೆ ಅರೆಭಾಷೆಯನ್ನು ಕಲಿಸಬೇಕು. ಅರೆಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಮಾತೃಭಾಷೆಯನ್ನು ಮರೆಯಬಾರದು ಎಂದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ ಅವರು ಮಾತನಾಡಿ ಅಕಾಡೆಮಿ ಸದಸ್ಯರು ಉದ್ಯೋಗದಲ್ಲಿದ್ದು ಅರೆಭಾಷೆ ಪದಕೋಶ ಹೊರತಂದಿದ್ದಾರೆ. ಅರೆಭಾಷೆಯಲ್ಲಿ ಇದೊಂದು ಮಹತ್ತರ ದಾಖಲೆ ಆಗಿದೆ. ಆ ನಿಟ್ಟಿನಲ್ಲಿ ಅರೆಭಾಷೆ ಪದಕೋಶ ಮತ್ತು ಪಾರಂಪರಿಕ ವಸ್ತುಕೋಶವನ್ನು ಪ್ರತಿ ಮನೆಯಲ್ಲೂ ಜತನ ಮಾಡಿ ಮಕ್ಕಳಿಗೆ ಓದುವಂತೆ ಮಾಡಬೇಕು ಎಂದು ಸಲಹೆ ಮಾಡಿದರು.

ಕೊಡಗು ಗೌಡ ಸಮಾಜದ ಅಧ್ಯಕ್ಷರಾದ ಪೇರಿಯನ ಜಯಾನಂದ ಅವರು ಮಾತನಾಡಿ ಇತ್ತೀಚಿನ ದಿನಗಳಲ್ಲಿ ಅರೆಭಾಷೆ ಮಾತನಾಡುವವರು ಕಡಿಮೆ ಆಗುತ್ತಿದ್ದಾರೆ. ಕನ್ನಡ, ಅರೆಭಾಷೆಯ ಜೊತೆಗೆ ಇತರೆ ಭಾಷೆಗಳನ್ನು ಮಾತನಾಡುವಂತಾಗಬೇಕು ಎಂದರು.
ಕೊಡಗು ಗೌಡ ಸಮಾಜಗಳ ಒಕ್ಕೂಟದ ನಿರ್ದೇಶಕರಾದ ರಾಜೇಶ್ ತೇನನ ಅವರು ಮಾತನಾಡಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಬೆಳವಣಿಗೆಗೆ ಅಕಾಡೆಮಿ ಅಧ್ಯಕ್ಷರು ಉತ್ತಮ ಕೆಲಸ ಮಾಡಿದ್ದಾರೆ. ಅರೆಭಾಷೆ ಪದಕೋಶವು ಇತಿಹಾಸ ಪುಟದಲ್ಲಿ ಸೇರಿದೆ. ‘ಸಾಹೇಬ್ರು ಬಂದವೇ’ ನಾಟಕವು ಅರೆಭಾಷೆ ಸಂಸ್ಕøತಿ ಬೆಳವಣಿಗೆಗೆ ಸಹಕಾರಿಯಾಗಿತ್ತು ಎಂಬುದನ್ನು ಮರೆಯುವಂತಿಲ್ಲ. ಒಳ್ಳೆಯ ಕೆಲಸ ಮಾಡುವವರಿಗೆ ಬೆನ್ನು ತಟ್ಟುವಂತಾಗಬೇಕು ಎಂದರು.
ಕೊಡಗು ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಕುಂಜಿಲನ ಮುತ್ತಮ್ಮ ಅವರು ಮಾತನಾಡಿ ಅರೆಭಾಷೆ ಉಳಿಸಿ ಬೆಳೆಸುವಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.

ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಅಕಾಡೆಮಿ ಹಿಂದಿನ ಅರ್ಥ ಸದಸ್ಯರಾದ ಕೆ.ಟಿ.ದರ್ಶನಾ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ ಅಕಾಡೆಮಿ ಅಧ್ಯಕ್ಷರ ಅವಧಿಯಲ್ಲಿ ಚಿತ್ರಕಲಾ ಪ್ರದರ್ಶನ, ಸಾಹೇಬ್ರು ಬಂದವೇ ನಾಟಕ ಪ್ರದರ್ಶನ, ಅರೆಭಾಷೆ ಪದಕೋಶ, ಅರೆಭಾಷೆ ಪಾರಂಪರಿಕ ವಸ್ತುಕೋಶ ಹೀಗೆ ಹಲವು ಕಾರ್ಯಗಳು ಅರೆಭಾಷೆ ಭಾಷೆ ಬೆಳವಣಿಗೆಗೆ ತುಂಬಾ ಉಪಯುಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅರೆಭಾಷೆ ಅಕಾಡೆಮಿ ಸದಸ್ಯರಾದ ಡಾ.ವಿಶ್ವನಾಥ ಬದಿಕಾನ ಅವರು ಮಾತನಾಡಿ 18 ತಿಂಗಳಲ್ಲಿ 18 ಸಾವಿರ ಪದಗಳ ಮೊದಲ ಯೂನಿಕೋಡ್‍ನ ಡಿಸ್ಟನರಿ ಹೊತ್ತಿಗೆ ಪ್ರಕಟಿಸಿರುವುದು ವಿಶೇಷವಾಗಿದೆ. ಅರೆಭಾಷೆ ಪ್ರದೇಶದ ಮನೆತನ, ಜಾಗದ ಹೆಸರು, ಗಾದೆಗಳು, ಒಗಟು, ನುಡಿಗಟ್ಟು, ಪ್ರಯೋಗ ವಾಕ್ಯ, ಹೀಗೆ ಹಲವು ಅಧ್ಯಯನಗಳನ್ನು ಅರೆಭಾಷೆ ಪದಕೋಶ ಒಳಗೊಂಡಿದೆ ಎಂದು ಅವರು ಹೇಳಿದರು.

ಅರೆಭಾಷೆ ಪದಕೋಶ ಸಂಗ್ರಹಿಸುವಲ್ಲಿ ಕ್ಷೇತ್ರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಕೆಂಜನ ಮಮತ ಪ್ರಸಾದ್, ಎಂ.ಜಿ.ಜೀವನ್, ಸುನಿಲ್ ಕುಮಾರ್ ಬಿ.ಬಿ., ಚೈತ್ರ ಪಿ., ರುಚಿತಾ ಎ.ಎಸ್., ಕೋಟೇರ ಶೃತಿ ಕಿಶೋರ್, ದರ್ಶಿನಿ, ಡೀನಾ ಜಿ.ಕೆ. ಗೂಡಂಜಿ ಮನೆ ಇವರಿಗೆ ನೆನಪಿನ ಕಾಣಿಕೆ, ಶಾಲೂ, ಪುಸ್ತಕ ನೀಡಿ ಸನ್ಮಾನಿಸಲಾಯಿತು. ಅರೆಭಾಷೆ ಪದಕೋಶ ಕರಡು ಪ್ರತಿ ತಿದ್ದುವ ಕಾರ್ಯ ಮಾಡಿದ ಬಾರಿಯಂಡ ಜೋಯಪ್ಪ ಅವರನ್ನು ಗೌರವಿಸಲಾಯಿತು.
ಅಕಾಡೆಮಿ ಸದಸ್ಯರಾದ ಬೈತಡ್ಕ ಜಾನಕಿ ಬೆಳ್ಯಪ್ಪ, ಸ್ಮಿತಾ ಅಮೃತರಾಜ್, ಕುಸುಮಾಧರ ಎ.ಟಿ., ಜಯಪ್ರಕಾಶ್ ಮೋಂಟಡ್ಕ ಬಿಳಿನೆಲೆ, ಪುರುಷೋತ್ತಮ ಕಿರ್ಲಾಯ, ಡಾ.ಪುರುಷೋತ್ತಮ ಕರಂಗಲ್ಲು, ಕಿರಣ್ ಕುಂಬಳಚೇರಿ ಇತರರು ಇದ್ದರು.

ರಿಜಿಸ್ಟ್ರಾರ್ ಚಿನ್ನಸ್ವಾಮಿ ಸ್ವಾಗತಿಸಿದರು, ಪ್ರೇಮ ರಾಘವಯ್ಯ ಅರೆಭಾಷೆ ಗೀತೆ ಹಾಡಿದರು, ಅಕಾಡೆಮಿ ಸದಸ್ಯರಾದ ಧನಂಜಯ ಅಗೋಳಿಕಜೆ ನಿರೂಪಿಸಿದರು, ಡಾ.ಕೂಡಕಂಡಿ ದಯಾನಂದ ವಂದಿಸಿದರು.

error: Content is protected !!