ಅರೆಭಾಷೆ ಅಕಾಡೆಮಿ ಕಡೆಂದ ಕಥೆ ಮತ್ತೆ ಕವನ ಸ್ಪರ್ಧೆ

✍🏻ವಿನೋದ್ ಮೂಡಗದ್ದೆ,
ಕೊಡಗು ಮತ್ತೆ ದಕ್ಷಿಣ ಕನ್ನಡ ಜಿಲ್ಲೆಗಳ್ಲಿ ಪ್ರಚಲಿತಲಿ ಇರುವ ಅರೆಭಾಷೆನ ಉಳ್ಸುವ, ಬೆಳ್ಸುವ ನಿಟ್ಟ್’ಲಿ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸ್ಥಾಪನೆ ಆಗಿದ್ದ್ ಇಲ್ಲಿಮುಟ್ಟ ಭಾಷೆ ಬೆಳವಣಿಗೆಲಿ ಮುಖ್ಯ ಪಾತ್ರ ವಹಿಸಿಕಂಡ್ ಬಂದುಟು. ಇತ್ತೀಚೆಗೆನ ದಿನಗಳ್ಲಿ ಕೊರೊನಾಂದಾಗಿ ಯಾವುದೇ ಜಂಬರ ನಡೆಯದೆ ಇರ್ದರ್ಂದ ಭಾಷೆ ಬೆಳವಣಿಗೆ ನಿಲ್ಲಿಕಾದ್ ತೇಳೋ ನಿಟ್ಟ್’ಲಿ ಅಕಾಡೆಮಿ ಕಡೆಂದ ಅರೆಬಾಸೆ ಕಥೆ ಮತ್ತೆ ಕವಿತೆ ಪೈಪೋಟಿನ ನಡ್ಸ್’ತಾ ಒಳೊ.
ಅರೆಭಾಷೆ ಗೊತ್ತಿರುವ ಯಾರ್ ಬೇಕಾರ್ ಈ ಪೈಪೋಟಿಲಿ ಭಾಗವಹಿಸಿಕ್. ಬರಹಗ ಸ್ವಂತ ರಚನೆ ಆಗಿದ್ದ್ ಎರಡೂ ವಿಭಾಗಕ್ಕೂ ತಮ್ಮ ಬರಹಗಳ ಕಳ್ಸಕ್. ಕಥೆ ಒಂದ್ ಸಾವಿರ ಪದಗಳ ಮೀರಿಕಾಗದ್. ಕವನಗ ೩೦ ಸಾಲ್’ನ ಮಿತಿಯೊಳಗಿರೊಕು. ಅರೆಭಾಷೆ ಮೂಲ ಪದಗಳ ಹೆಚ್ಚ್ ಬಳ್ಸಿಕಂಡಷ್ಟ್ ಒಳ್ಳದ್.
ಕಥಾ ಪೈಪೋಟಿಲಿ ಸುರುನ ಇನಾಮು ₹5000/-, ಎರಡನೇ ಇನಾಮು ₹3000/-, ಮೂರನೇ ಇನಾಮು ₹2000/-.
ಕವನಕ್ಕೆ ಕ್ರಮಲಿ ₹3000/-, ₹2000/-, ₹1000/- ಇನಾಮು ನ ಘೋಷಣೆ ಮಾಡಿಯೊಳೊ.

ನಿಮ್ಮ ಬರಹಗಳ್ನ ಆಗಸ್ಟ್ 8 ನೇ ತಾರೀಖ್ ನ ಒಳಗೆ ಅಂಚೆಲಿ ಕಳ್ಸವು : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ‘ಕಾಫಿ ಕೃಪಾ’, ರಾಜಾಸೀಟ್ ರಸ್ತೆ, ಮಡಿಕೇರಿ.
ಈ ವಿಳಾಸಕ್ಕೆ ಹಂಗೆನೆ ಮಿಂಚಂಚೆ ಕಳ್ಸವು arebaseacademy@gmail.com ಗೆ ಕಳ್ಸಕ್ ತ ಅಕಾಡೆಮಿ ಪ್ರಕಟಣೆಲಿ ತಿಳ್ಸಿಯೊಳೊ.
✍🏻ವಿನೋದ್ ಮೂಡಗದ್ದೆ