ಅರೆಬಾಸೆ ಸಂಸ್ಕೃತಿ ಮತ್ತೆ ಸಾಹಿತ್ಯ ಕ್ಷೇತ್ರದ ಜನಂಗಳ ಮಾಹಿತಿ ಸಂಗ್ರಹಕ್ಕೆ ಚಾಲನೆ.

✍ವಿನೋದ್ ಮೂಡಗದ್ದೆ,
ಒಂದು ಸಂಸ್ಕೃತಿ ಉಳಿಯಕು ತ ಆದರೆ ಮಾತಾಡ್ವ ಭಾಷೆ ಗಟ್ಟಿ ಆಗಿರೊಕು. ಅದಕ್ಕೊಂದು ಅಕ್ಷರ ರೂಪ ಸಿಕ್ಕೊಕು. ಆಗ ಮಾತ್ರ ಅದ್ ಅಳಿಯದೇ ಮುಂದೆನ ಪೀಳಿಗೆಗೆ ಸ ಮುಂದುವರ್’ಕಂಡ್ ಹೋದೆ. ಇಂದ್ ಅದೆಷ್ಟೋ ಭಾಷೆಗ ಅಳಿವಿನಂಚಿನಿಗೆ ಬಂದು ಎತ್ತಿಯುಟು.

ಕೊಡಗು ಮತ್ತೆ ದಕ್ಷಿಣ ಕನ್ನಡ ಜಿಲ್ಲೆಲಿ ಪ್ರಚಲಿತಲಿ ಇರುವ ಬಾಸೆ ಅರೆಬಾಸೆ. ಇದರ ಒಳ್ಸಿ ಬೆಳ್ಸುವ ನಿಟ್ಟ್’ಲಿ ರಾಜ್ಯ ಸರಕಾರ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿನ ಸ್ಥಾಪನೆ ಮಾಡಿಯುಟು. ಈಗಾಗಲೇ ಮೂರು ಅಧ್ಯಕ್ಷರ್ ಇದರ ಚುಕ್ಕಾಣಿ ಹಿಡ್ದ್ ಬಾಳ ಲಾಯ್ಕಲಿ ಕಾರ್ಯಗಳ ನಡ್ಸಿಯೊಳೊ.
ಈಗ ನಾಲ್ಕನೇ ಅವಧಿಗೆ ತಂಡ ರಚನೆ ಆಗಿದ್ದ್ ಅರೆಭಾಷೆಗೆ ಸಂಬಂಧಿಸಿದಂಗೆ ಸಾಹಿತಿಗ, ಕಲಾವಿದರ್, ಜಾನಪದ ಮಾಹಿತಿಗಾರರ್ ಹಿಂಗೆ ಹಲವಾರ್ ಬಗೆಲಿ ಅಕಾಡೆಮಿ ಕಾರ್ಯವ್ಯಾಪ್ತಿಲಿ ಮಾತನಾಡ್’ವ, ಬರಿವ ಜನರ ಒಟ್ಟ್ ಸೇರ್ಸಕು ತೇಳೋ ನಿಟ್ಟ್’ಲಿ ಒಂದು ಯೋಜನೆನ ರೂಪಿಸಿಯೊಳೊ.
ಎಲ್ಲ ಕಲಾವಿದರ, ಸಾಹಿತಿಗಳ ವಿವರನ ದಾಖಲೀಕರಣ ಮಾಡುವ ಕಾರ್ಯನ ಸುರು ಮಾಡಿದ್ದ್. ಕೆಳಗೆ ಕೊಟ್ಟ ಕೊಂಡಿಲಿ ನಿಮ್ಮ ದಾಖಲೆಗಳ ತುಂಬಿ ಈ ಕಾರ್ಯಕ್ಕೆ ಕೈ ಜೋಡ್ಸಕು ತ ಅಕಾಡೆಮಿನ ಅಧ್ಯಕ್ಷರಾದ ಶ್ರೀ ಲಕ್ಷ್ಮಿನಾರಾಯಣ ಕಜೆಗದ್ದೆ ಅವು ಕೇಳಿಕಂಡೊಳೊ.
ವಿವರ ಕೊಡಿಕೆ ಇಲ್ಲಿ ಒತ್ತಿ https://forms.gle/T3VjjmQh7MYNBxoa6
✍🏻ವಿನೋದ್ ಮೂಡಗದ್ದೆ