ಅರಸರ ಗದ್ದುಗೆ ಸಂರಕ್ಷಣೆಗೆ ಹೈಕೋರ್ಟ್ ಆದೇಶ


ಕೊಡಗು: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಕೊಡಗಿನ ಅರಸರ ಗದ್ದುಗೆಯನ್ನು ಸರ್ಕಾರ ನಿರ್ಲಕ್ಷ್ಯ ಮಾಡಿದ್ದು,ಈ ಪ್ರದೇಶಕ್ಕೆ ಒಳಪಡುವ 19 ಏಕರೆ 86 ಸೆಂಟ್ ಜಾಗದಲ್ಲಿ ಸಾಕಷ್ಟು ಅತಿಕ್ರಮ ನಡೆದಿದ್ದು ಇದನ್ನು ಸಂರಕ್ಷಿಸುವಂತೆ ರಾಜ್ಯ ಉಚ್ಚನ್ಯಾಯಾಲಯದ ವಿಭಾಗ ಪೀಠ ಆದೇಶ
ನೀಡಿದೆ.

ಮಡಿಕೇರಿ ಹೃದಯ ಭಾಗದಲ್ಲಿರುವ ಕೋಟೆ ಸಂರಕ್ಷಣೆ ಬಗ್ಗೆ ಈ ಹಿಂದೆ ನ್ಯಾಯಾಲಯದ ಮೆಟ್ಟಿಲ್ಲೇರಿದ ನಿವೃತ್ತ ಐಎಎಸ್ ಅಧಿಕಾರಿ ಜೆ.ಎಸ್ ವಿರೂಪಾಕ್ಷಪ್ಪ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದ ಮೇರೆಗೆ ವಿಭಾಗ ಪೀಠದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀಿನಿವಾಸ್ ಈ ಆದೇಶ ನೀಡಿದ್ದಾರೆ.

ಹನ್ನೆರಡು ವರ್ಷಗಳ ಹಿಂದೆ ಮಡಿಕೇರಿ ತಹಶೀಲ್ದಾರ್ ರವರಿಗೆ ಅತಿಕ್ರಮಣ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ,1981ರಲ್ಲಿ ಸರ್ಕಾರದ ಅದೀನದಲ್ಲಿರುವ ಈ ಐತಿಹಾಸಿಕ ಪ್ರದೇಶವನ್ನು ಸರ್ವೆ ಕಾರ್ಯ ನಡೆಸಿ,ಅತಿಕ್ರಮಣ ಮಾಡಿದ ಸ್ಥಳದಲ್ಲಿ ವಾಸವಿರುವವರನ್ನು ತೆರವುಗೊಳಿಸಿ ಸಂರಕ್ಷಿಸುವಂತೆ ಕೊಡಗು ಜಿಲ್ಲಾಧಿಕಾರಿಗಳಿಗೆ ಆದೇಶಿಸಲಾಗಿದೆ.ರಿಟ್ ಅರ್ಜಿ ವಿಚಾರಣೆ ಮೇ 28ಕ್ಕೆ ಮುಂದೂಡಲಾಗಿದೆ.

error: Content is protected !!