ಅರಮನೆ ಆವರಣ ತಲುಪಿದ ಗಜ ಪಡೆ!

ವಿಶ್ವವಿಖ್ಯಾತ ಮೈಸೂರು ದಸರಾ, ಅರಮನೆ ಆವರಣಕ್ಕೆ ತಲುಪಿದ ಗಜಪಡೆ ಜಯ ಮಾರ್ತಾಂಡ ದ್ವಾರದ ಮೂಲಕ ಅರಮನೆ ಪ್ರವೇಶ ಮಾಡಿದೆ.

ಮೈಸೂರಿನ ಅರಣ್ಯ ಭವನದಿಂದ ರಸ್ತೆ ಮೂಲಕ ಅರಮನೆ ತಲುಪಿದ ಅಭಿಮನ್ಯು ಮತ್ತು ತಂಡ ಜನ ಮನ ಸೆಳೆಯಿತು. ಅಭಿಮನ್ಯು, ಅಶ್ವತ್ಥಾಮ, ಧನಂಜಯ, ವಿಕ್ರಮ, ಗೋಪಾಲಸ್ವಾಮಿ, ಕಾವೇರಿ, ಚೈತ್ರ ಮತ್ತು ಲಕ್ಷ್ಮಿ ಆನೆಗಳಿರುವ ತಂಡಕ್ಕೆ ಅಲಂಕಾರವನ್ನು ಅರಮನೆ ಆವರಣದಲ್ಲಿ ಮಾಡಿ, ಸಾಂಪ್ರದಾಯಿಕ ಪೂಜೆ ನಡೆಸಲಾಯಿತು. ನಾಳೆ ಆನೆಗಳ ತೂಕ ಪರೀಕ್ಷೆ ಮತ್ತು ತಾಲೀಮು ಆರಂಭವಾಗಲಿದೆ.

error: Content is protected !!