fbpx

ಅರಣ್ಯ ಸಿಬಂದಿಗಳಿಗೆ ಆಹಾರ ಕಿಟ್ ವಿತರಣೆ

ಕೊಡಗು: ಪೊನ್ನಂಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕಿನ ತಿತಿಮತಿ ವಲಯದ ೪೦ ಅರಣ್ಯ ಸಂರಕ್ಷಣಾ ಸಿಬ್ಬಂದಿಗಳಿಗೆ, ಗುತ್ತಿಗೆ ಸಿಬ್ಬಂದಿಗಳಿಗೆ ವಿ ಸಫೋರ್ಟ್ ಫೌಂಡೇಶನ್ -ಬೆಂಗಳೂರು ಮತ್ತು ಬಾಲ್ಯಟ್ರಸ್ಟ್ ಸಂಸ್ಥೆಯಿಂದ ದಿನಸಿ ಕಿಟ್ ವಿತರಣೆ ಮಾಡಲಾಯಿತು.

ವಿವಿಧ ಹಾಡಿಗಳ ಜೇನುಕುರುಬ, ಸೋಲಿಗ, ಪಣಿಯ ಕುಟುಂಬಗಳ ಆದಿವಾಸಿಗಳು ಗುತ್ತಿಗೆ, ಅರೆಗುತ್ತಿಗೆ ಸಿಬ್ಬಂದಿಯಾಗಿ ಅರಣ್ಯ ಸಂರಕ್ಷಣಾ ಇಲಾಖೆಯಲ್ಲಿ ಕಡಿಮೆ ವರಮಾನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಕೊರೋನಾ ಸಂಕಷ್ಟದಿಂದಾಗಿ ಅವರ ಕುಟುಂಬ ತೊಂದರೆಗೊಳಗಿದ್ದು ‘ವಿ ಸಪೋಟ್ ಫೌಂಡೇಶನ್’ ಮತ್ತು ಬಾಲ್ಯಟ್ರಸ್ಟ್ ಸಂಸ್ಥೆಯ ಸಹಯೋಗದಲ್ಲಿ ‘ಲೆಟ್ಸ್ ಫೀಡ್ ಹಂಗ್ರಿ ಸ್ಟಮಕ್ಸ್’ ಆಂದೋಲನದ ಮೂಲಕ ೧೫ ದಿನಗಳಿಗಾಗುವಷ್ಟು (ಅಕ್ಕಿ ೧೦ ಕೆ.ಜಿ, ಗೋಧಿ ಹಿಟ್ಟು-೨ಕೆ.ಜಿ, ಕಡಲೇಬೀಜ-೧ ಕೆ.ಜಿ, ಬೇಳೆ-೧ಕೆ.ಜಿ, ಬೆಲ್ಲ ೧ ಕೆ.ಜಿ, ಎಣ್ಣೆ೧ಲೀಟರ್, ಸಾಂಬರು ಪುಡಿ, ಅರಿಸಿನ, ಟೀ ಪುಡಿ, ಬಟ್ಟೆ ಹಾಗೂ ಸ್ನಾನದ ಸಾಬೂನು -೪, ಮತ್ತು ಬಿಸ್ಕತ್ ಸೇರಿದಂತೆ) ದಿನಸಿ ಕಿಟ್‌ನ್ನು ಕೊರೋನಾ ಸಂಕಷ್ಟ ಕಾಲದ ಸಹಾಯಾರ್ಥವಾಗಿ ತಿತಿಮತಿ ವಲಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ‘ಲೆಟ್ಸ್ ಫೀಡ್ ಹಂಗ್ರಿ ಸ್ಟಮಕ್ಸ್’- ಆಂದೋಲನದ ಸದಸ್ಯರಾದ ಶ್ರೀ ಅನಂತ್ ಮತ್ತು ಶ್ರೀ ಉತ್ತಪ್ಪ, ಸಹಾಯಕ ಸಂರಕ್ಷಣಾಧಿಕಾರಿ–ತಿತಿಮತಿ ಉಪ ವಿಭಾಗ, ಶ್ರೀ ಅಶೋಕ್ ಪಿ ಹುನಗುಂದ ವಲಯ ಅಧಿಕಾರಿಗಳು ಇವರ ಸಮ್ಮುಖದಲ್ಲಿ ವಿತರಣೆಮಾಡಲಾಯಿತು.

error: Content is protected !!