ಅರಣ್ಯ ಭವನದಲ್ಲಿ ಔಷಧಿ ಗಿಡ ಮೂಲಿಕೆಯ ಸಮನ್ವಯ ಕಾರ್ಯಗಾರ

ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರ ಮತ್ತು ಕರ್ನಾಟಕ ಜೀವವೈವಿದ್ಯ ಮಂಡಳಿ,ಮೈಸೂರು ಅರಣ್ಯ ವೃತ್ತದ ವತಿಯಿಂದ ಮೈಸೂರಿನಲ್ಲಿ ರಾಷ್ಟ್ರೀಯ ಔಷಧಿ ಗಿಡಮೂಲಿಕಾ ಮಂಡಳಿಯ ಪ್ರಾಯೋಜಿತ ಯೋಜನೆಯಡಿಯಲ್ಲಿ “ಔಷಧಿ ಸಸ್ಯಗಳ ಕುರಿತ ಮೈಸೂರು ವಿಭಾಗ ಮಟ್ಟದ ಅರಣ್ಯ ಅಧಿಕಾರಿಗಳು ಮತ್ತು ಮುಂಚೂಣಿ ಸಿಬ್ಬಂಧಿಗಾಗಿ ಸಾಮರ್ಥ್ಯ ವರ್ಧನೆ ಮತ್ತು ಸಮನ್ವಯ ಕಾರ್ಯಗಾರ” ಮೈಸೂರಿನ ಅರಣ್ಯ ಭವನದಲ್ಲಿ ಅದ್ದೂರಿಯಾಗಿ ನಡೆಯಿತು.

ಇತ್ತೀಚೆಗೆ ಕರ್ನಾಟಕ ಜೀವವೈವಿದ್ಯ ಮಂಡಳಿಯ ಅಧ್ಯಕ್ಷರಾದ ಕೊಡಗಿನ ಎನ್. ಎಂ ರವಿ ಕಾಳಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕಾರ್ಯಗಾರದಲ್ಲಿ ಜೈವಿಕ ವೈವಿಧ್ಯ ಕಾಯಿದೆ 2002,ಪಾರಂಪರಿಕ ತಾಣಗಳು ಮತ್ತು ಜನತಾ ಜೀವವೈವಿದ್ಯ ದಾಖಲಾತಿ, ಔಷಧಿ ಸಸ್ಯಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ಮತ್ತು ವಹಿವಾಟು, ಸಸ್ಯಗಳ ವೈವಿದ್ಯಕತೆ ಮತ್ತು ಹಂಚಿಕೆ, ಸಂಗ್ರಹಣಾ ಪದ್ದತಿಗಳು ಮತ್ತು ಕೊಯ್ಲೋತರ ನಿರ್ವಹಣೆ ಕುರಿತು ಚರ್ಚೆ ನಡೆದವು.

error: Content is protected !!