ಅರಣ್ಯ ಇಲಾಖೆಯಿಂದ ಗಿಡ ವಿತರಣೆ

ಮಡಿಕೇರಿ ಸಾಮಾಜಿಕ ಅರಣ್ಯ ವಿಭಾಗ ವ್ಯಾಪ್ತಿಗೆ ಒಳಪಡುವ ಮಡಿಕೇರಿ ಸಾಮಾಜಿಕ ಅರಣ್ಯ ವಲಯದಲ್ಲಿನ ಹೊದ್ದೂರು-ವಾಟೆಕಾಡು, ವಿರಾಜಪೇಟೆ ಸಾಮಾಜಿಕ ಅರಣ್ಯ ವಲಯದಲ್ಲಿನ ಕದನೂರು ಹಾಗೂ ಸೋಮವಾರಪೇಟೆ ಸಾಮಾಜಿಕ ಅರಣ್ಯ ವಲಯದಲ್ಲಿನ ಹುದುಗೂರು ಇಲಾಖಾ ಸಸ್ಯ ಕ್ಷೇತ್ರಗಳಲ್ಲಿ ಸಿಲ್ವರ್, ಮಹಾಗನಿ, ಬಸವನಪಾದ, ಹಲಸು, ನೇರಳೆ ಮತ್ತು ಇತರೆ ಜಾತಿಯ ಸಸಿಗಳಿದ್ದು, ಗಿಡ ಒಂದಕ್ಕೆ ರೂ. 1 ರಂತೆ ಹಾಗೂ ರೂ. 3 ರಂತೆ ವಿವಿಧ ಅಳತೆಯ ಸಸಿ ವಿತರಣಾ ಕಾರ್ಯವು ಜೂನ್ 1 ರಿಂದ ಪ್ರಾರಂಭಿಸಲಾಗಿದೆ.

ಆಸಕ್ತ ಫಲಾನುಭವಿಗಳು ಅರ್ಜಿಯೊಂದಿಗೆ ಜಮೀನಿನ ಆರ್‍ಟಿಸಿ ಪ್ರತಿ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆಯ ಪ್ರತಿಯೊಂದಿಗೆ ಸಮೀಪದ ಸಸ್ಯ ಕ್ಷೇತ್ರಕ್ಕೆ ಭೇಟಿ ಸಸಿಗಳನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಸಾಮಾಜಿಕ ಅರಣ್ಯ ವಲಯ ಸೋಮವಾರಪೇಟೆ ದೂ.ಸಂ 6360274591, 9483646101, ಸಾಮಾಜಿಕ ಅರಣ್ಯ ವಲಯ ವಿರಾಜಪೇಟೆ ದೂ.ಸಂ. 9483835993, 9663945228, ಸಮಾಜಿಕ ಅರಣ್ಯ ವಲಯ ಮಡಿಕೇರಿ ದೂ.ಸಂ. 9483835993, 7829301127 ನ್ನು ಸಂಪರ್ಕಿಸಬಹುದಾಗಿದೆ ಎಂದು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.

error: Content is protected !!