fbpx

‘ಅರಣ್ಯದ ಮೇಲೆ‌ ಮಾನವನ ಹಸ್ತಕ್ಷೇಪ ಬೇಡ’ ಬೆಂಗಳೂರಿನಲ್ಲಿ ಸನ್ಮಾನ ಸ್ವೀಕರಿಸಿ ಚಿಣ್ಣಪ್ಪ ಮಾತು

ಅಭಯಾರಣ್ಯ ಗಳು,ವನ್ಯಪ್ರಾಣಿಗಳ ವಿನಾಶಕ್ಕೆ ಮಾನವನೇ ಕಾರಣ.ಹಲವು ಪ್ರಭೇದದ ಗಿಡಮರಗಳು,ವನ್ಯಪ್ರಾಣಿಗಳು ಇಂದು ವಿನಾಶದ ಅಂಚಿನಲ್ಲಿವೆ.ಇವುಗಳ ರಕ್ಷಣೆ ನಮ್ಮ ಹೊಣೆ.ಮಾನವನ ಹಸ್ತಕ್ಷೇಪ ಅರಣ್ಯದ ಮೇಲೆ ಕೂಡದು.ಒಂದೊಮ್ಮೆ ಕಾಡುಪ್ರಾಣಿಗಳು,ಅಮೂಲ್ಯ ಸಸ್ಯ ಗಳು ಕಣ್ಮರೆಯಾದಲ್ಲಿ ಮಾನವನ ಅವಸಾನ ಖಚಿತ ಎಂದು ವೈಲ್ಡ್ ಲೈಫ್ ಫಸ್ಟ್ ರಾಜ್ಯಾಧ್ಯಕ್ಷ,ವನ್ಯಪ್ರೇಮಿ ಕೆ.ಎಂ.ಚಿಣ್ಣಪ್ಪ ವಿವರಿಸಿದರು.

ಬೆಂಗಳೂರು ಯಶವಂತಪುರದ ಆರ್.ಜಿ.ರಾಯಲ್ ಹೋಟೆಲ್ ಸಭಾಂಗಣದಲ್ಲಿ ಜರುಗಿದ ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ (ಜಿಲ್ಲೆ 317ಎಫ್) ವಲಯ ಸಮಾವೇಶದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪರಿಸರ ಸಂರಕ್ಷಣೆಯಲ್ಲಿ ಯುವ ಜನಾಂಗದ ಕರ್ತವ್ಯ ವಿಚಾರವಾಗಿ ಚಿಣ್ಣಪ್ಪ ಮಾತನಾಡಿ, ಅರಣ್ಯ ಬೆಳೆಸಲು ಮನುಷ್ಯನಿಂದ ಅಸಾಧ್ಯ.ವನ್ಯಪ್ರಾಣಿಗಳ ಸಂರಕ್ಷಣೆಗೆ ಯುವ ಜನಾಂಗ ಕೈಜೋಡಿಸಿದ್ದಲ್ಲಿ ಉತ್ತಮ ಅರಣ್ಯ ಬೆಳೆಸಲು ಸಾಧ್ಯ.ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ 1980 ರ ದಶಕದಲ್ಲಿ ವನ್ಯಪ್ರಾಣಿಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ಅನುಸರಿಸಿದ ಹಿನ್ನೆಲೆ ಕಾಡುಪ್ರಾಣಿಗಳ ಸಂಖ್ಯೆ ಅಧಿಕವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಆರ್.ಲೀಲಾ ಕ್ರಷ್ಣ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾಜಿ ಹಿರಿಯ ಅಧಿಕಾರಿ, ಕೆಪಿಎಸ್ ಸಿ ಗೌರವ ಸದಸ್ಯ ಡಾ.ಆರ್.ಲಕ್ಷ್ಮಿನಾರಾಯಣ ಅವರೂ ಸನ್ಮಾನ ಸ್ವೀಕರಿಸಿ ಪರಿಸರ ಸಮತೋಲನ ಕಾಪಾಡುವಲ್ಲಿ ಯುವಜನಾಂಗದ ಪಾತ್ರ ಕುರಿತು ಮಾತನಾಡಿದರು.
ಲಯನ್ಸ್ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಬಿ.ಎಂ.ರವಿನಾಯ್ಡು ಉಸ್ತುವಾರಿಯಲ್ಲಿ ಜರುಗಿದ ಸಮಾವೇಶದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲ ಮನೋಹರನ್ ನಂಬಿಯಾರ್ ಭಾಗವಹಿಸಿ ಪರಿಸರ ಕಾಳಜಿ ವಹಿಸಿರುವ ಯುವ ವಲಯಾಧ್ಯಕ್ಷ ಲೀಲಾ ಕ್ರಷ್ಣ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

error: Content is protected !!