ಅಯೋಧ್ಯೆ ನೇಪಾಳಿನಲ್ಲಿದೆ, ಶ್ರೀ ರಾಮನೂ ನೇಪಾಳಿ: ಕೆ.ಪಿ ಶರ್ಮಾ ಓಲಿ

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ನೇಪಾಳಿ ಪ್ರಧಾನಿ ಕೆ.ಪಿ ಶರ್ಮಾ ಓಲಿ,’ನಿಜವಾದ ಅಯೋಧ್ಯೆ ನಗರ ನೇಪಾಳಿನಲ್ಲಿದೆ. ಅಲ್ಲಿಯೇ ರಾಮ ಜನಿಸಿದ್ದ. ಆದ್ದರಿಂದ ಶ್ರೀ ರಾಮ ಭಾರತೀಯನಾಗಿರಲಿಲ್ಲ. ಅವನು ನೇಪಾಳಿಯಾಗಿದ್ದ’ ಎಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಮತ್ತೂ ಮುಂದುವರೆದು ‘ಅಯೋಧ್ಯೆ ನೇಪಾಳಿನ ದಕ್ಷಿಣ ಭಾಗದ ಬಿರ್ಜುಂಗ್ ಜಿಲ್ಲೆಯಲ್ಲಿದ್ದು, ಅಲ್ಲಿ ರಾಮನ ಜನನವಾಗಿತ್ತು. ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಹುಟ್ಟಿರಲಿಲ್ಲ’ ಎಂದು ಭಾರತವನ್ನು ವಿನಾಕಾರಣ ಭಾರತವನ್ನು ಕೆಣಕಿದ್ದಾರೆ.
‘ಚೀನಾ, ನೇಪಾಳಕ್ಕಿಂತ ಭಾರತದಲ್ಲಿ ಕೊರೋನಾ ಹೆಚ್ಚಿದೆ. ಕೊರೋನಾ ನಿಯಂತ್ರಣದಲ್ಲಿ ಭಾರತ ಸಂಪೂರ್ಣ ವಿಫಲವಾಗಿದೆ’ ಎಂದು ಕೆಂಡಕಾರಿದ್ದಾರೆ.