ಅಯೋಧ್ಯೆಗೆ ಕೊಡಗಿನ ಮಣ್ಣು-ಕಾವೇರಿ ಜಲ ರವಾನೆ

ಕೊಡಗು(ತಲಕಾವೇರಿ/ಭಾಗಮಂಡಲ):ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀರಾಮ ಮಂದಿರದ ಭೂಮಿ ಪೂಜೆ ಮತ್ತು ಶಿಲಾನ್ಯಾಸದ ಸಮಾರಂಭಕ್ಕೆ ಕೊಡಗಿನ ಮಣ್ಣು ಮತ್ತು ಜೀವನದಿ ಕಾವೇರಿಯ ಪವಿತ್ರ ಜಲವನ್ನು ರವಾನಿಸಲಾಗಿದೆ.

ಮೃತ್ತಿಕೆ ಎಂದು ಕರೆಯಲ್ಪಡುವ ಪವಿತ್ರ ಮಣ್ಣನ್ನು ಶ್ರೀ ಕ್ಷೇತ್ರ ತಲಕಾವೇರಿಯಲ್ಲಿ ಶ್ರೀ ರಾಮ ಜನ್ಮ ಭೂಮಿ ಟ್ರಸ್ಟ್ ವತಿಯಿಂದ ಸಾಮೂಹಿಕ ಪೂಜೆ ಸಲ್ಲಿಸಿ ಮೃತ್ತಿಕೆ ಮತ್ತು ತೀರ್ಥವನ್ನು ಅಂಚೆ ಮೂಲಕ ಅಯ್ಯೋಧ್ಯೆಗೆ ಕಳುಹಿಸಿಕೊಡಲಾಯಿತು.