ಅಮ್ಮ ಊರೇನೆ ಅಂದರೂ ನೀ ನನ್ನ ದೇವರು…!

ತಾಯಂದಿರ ದಿನಾಚರಣೆ ಪ್ರಯುಕ್ತ ಯುವ ಬರಹಗಾರರಾದ ಪ್ರತೀಕ್ ಪರಿವಾರ ಅವರು ಬರೆದಿರುವ ಅರ್ಥಪೂರ್ಣ ಲೇಖನ. ಓದಿ
ಪ್ರಥಮವಾಗಿ ಪೂಜ್ಯ ಭಾರತಮಾತೆಗೆ ಗೌರವವನ್ನು ನೀಡುತ್ತಾ, ವಿಶ್ವದ ಎಲ್ಲಾ ತಾಯಂದಿರಿಗೂ ತಾಯಂದಿರ ದಿನಾಚರಣೆಯ ಶುಭಾಶಯಗಳನ್ನು ಆಶಿಸುತ್ತಾ, ತಾಯಿಯ ಬಗೆ ಒಂದಿಷ್ಟು ಅನಿಸಿಕೆ ಅಥವಾ ಅಭಿಪ್ರಾಯ ಅಕ್ಷರ ರೂಪದಲ್ಲಿ…
ಪ್ರತಿಯೊಬ್ಬನ ಜನನಕ್ಕೆ ಕಾರಣವಾದ ಜೀವ, ಅದೆಷ್ಟು ಅವಮಾನವಾದರು ತನ್ನ ಮಕ್ಕಳು, ಗಂಡನಿಗಾಗಿ ಅದನ್ನೆಲ್ಲಾ ಮರೆವ ದೈವ, ಪ್ರೀತಿ ಏನೆಂದು ನಮಗರಿಯುವ ಮೊದಲೇ ನಮ್ಮನ್ನು ಪ್ರೀತಿಸಿದ ಸೌಜನ್ಯತೆಯ ಪ್ರತೀಕ, ದೇವರೆ ಮೂರ್ತಿವೆತ್ತಂತಿರುವ ರೂಪ ಅದುವೇ ಅಮ್ಮ….
9 ತಿಂಗಳು ತನ್ನ ಗರ್ಭವೆನ್ನುವ ಗುಡಿಯಲ್ಲಿ ಸಾಕಿ, ಜೀವವೇ ಹೋಗುವ ನೋವನ್ನು ತಡೆದುಕೊಂಡು ನಮ್ಮ ಜನನಕ್ಕೆ ಕಾರಣವಾದ ಅಮ್ಮ ದೇವರೇ ಅಲ್ಲವೇ. ಒಂದು ವರದಿಯ ಪ್ರಕಾರ ಶಿಶು ಜನಿಸುವ ಸಂದರ್ಭದಲ್ಲಿ ನಮ್ಮ ದೇಹದ ಮೂಳೆಗಳನ್ನು ಒಟ್ಟಿಗೆ ಮುರಿದರೆ ಆಗುವ ನೋವು ಆ ಸಮಯದಲ್ಲಿ ಒಬ್ಬಾಕೆ ಹೆಣ್ಣಿಗೆ ಆಗುತ್ತದೆಯಂತೆ!!!
‘ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರಿಯಸಿ‘ ಎಂಬ ಪುರಾಣ ವಾಕ್ಯದಂತೆ ಹೆತ್ತ ತಾಯಿ ಹೊತ್ತ ಭೂಮಿ ಸ್ವರ್ಗಕ್ಕಿಂತ ಮಿಗಿಲು ಎಂದು ನಂಬಿರುವ ಭಾರತೀಯರು ನಾವು..
ನಾವು ಪೂಜಿಸುವ ದೇವರಲ್ಲಿ,ಅಕ್ಕ ತಂಗಿಯ ಪ್ರೀತಿಯಯಲ್ಲಿ, ವಿದ್ಯೆ ಕಲಿಸುವ ಗುರುಗಳ ಮಾರ್ಗದರ್ಶನದ ಮಾತಿನಲ್ಲಿ, ಪ್ರೀತಿಸುವ ಪ್ರೇಯಸಿಯ ಕಾಳಜಿಯಲ್ಲಿ ತಾಯಿಯನ್ನು ಕಂಡವರೂ ನಾವು.
ಭಾರತಮಾತೆ
ಸಂಘದ ಕಾರ್ಯಕರ್ತರಿಗೆ ಭಾರತ ದೇಶ ತಾಯಿ ಸ್ವರೂಪಿಣಿ. ತಮ್ಮ ಪ್ರತಿ ಸೇವಾ ಕಾರ್ಯದಲ್ಲೂ ಅವರು ಹೇಳುವುದು ಇದು ತಾಯಿ ಭಾರತಿಯ ಸೇವೆ ಎಂದು.. ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ಎಸ್)ನ ಧ್ಯೇಯ ಮತ್ತು ಪ್ರಾರ್ಥನಾ ಗೀತೆ ಅರ್ಥ ಮಾಡಿಕೊಂಡರೆ ಅದರಲ್ಲಿರುವುದು ಸಹ ಇದುವೇ ನಮಸ್ತೆ ಸದಾ ವತ್ಸಲೇ ಮಾತೃಭೂಮೇ…. ಎನ್ನುವ ಪವಿತ್ರ ವಾಕ್ಯ…
ಕಲಾಮಾತೆ
ಇನ್ನೂ ಕಲಾವಿದರು ಪೂಜಿಸುವುದು ಕಲಾಮಾತೆಯನ್ನು. ತಮ್ಮೆಲ್ಲ ಕಲೆಗೂ ಕಲಾಮಾತೆಯ ಆಶೀರ್ವಾದವಿದೆ ಎಂದು ನಂಬುವ ಕಲಾವಿದರು ಇಂದಿಗೂ ಕಾಣಸಿಗುತ್ತಾರೆ. ಅದರಲ್ಲೂ ಯಕ್ಷಗಾನ ಎಂಬ ಕಲೆಯಲ್ಲಿ ಈ ನಂಬಿಕೆ ಹೆಚ್ಚು…
ಉತ್ತಮ ಮಡದಿಯೂ ಅಮ್ಮನ ಸ್ವರೂಪವೇ
ಮನೆಯ ಖರ್ಚನ್ನು ನಿಭಾಯಿಸಿಕೊಂಡು, ಮಕ್ಕಳನ್ನು ಓದಿಸಿ, ಗಂಡನಿಗೆ ಬೆಂಗಾವಲಾಗಿ ನಿಲ್ಲುವ ಹೆಂಡತಿ ಕೂ ಒಂದು ರೀತಿಯಲ್ಲಿ ತಾಯಿ ಸ್ವರೂಪವಲ್ಲದೇ ಮತ್ತಿನ್ನೇನು….!
ಮತ್ತೊಮ್ಮೆ ನಮ್ಮ ಜನ್ಮ ಭಾರತಾಂಬೆಯ ಮಡಿಲಲ್ಲೇ ಆಗಲಿ ಎಂದು ಪ್ರಾರ್ಥಿಸುತ್ತಾ ಮತ್ತೊಮ್ಮೆ ವಿಶ್ವದ ಎಲ್ಲಾ ತಾಯಂದಿರಿಗೂ ತಾಯಂದಿರ ದಿನದ ಶುಭಾಶಯಗಳು …
✍🏻 ಪ್ರತೀಕ್ ಪರಿವಾರ ಮರಗೋಡು