ಅಮ್ಮನ ನರಳಾಟಕ್ಕೆ ನೊಂದು ಮಗ ಆತ್ಮಹತ್ಯೆ

ಕೊಡಗು: ಕೊರೊನಾದಿಂದ ತಾಯಿ ನರಳಾಡುತ್ತಿರುವುದನ್ನು ಕಣ್ಣಾರೆ ಕಂಡು ಮನನೊಂದ ಮಗ ಅದೇ ಆಸ್ಪತ್ರೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ,ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ನಡ8ದಿದೆ.ಮೂಲತಃ ಶನಿವಾರಸಂತೆಯ ಮಾದರೆ ಗ್ರಾಮದ ಶರತ್ ಎಂಬಾತ ಆತ್ಮಹತ್ಯೆ ಮಾಡಿಕೊಂಡಾತ.ಬೆಂಗಳೂರಿ ರಿಲಾಯನ್ಸ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಶರತ್ ಇತ್ತೀಚೆಗೆ ಕೆಲಸ ತೊರೆದು ಬಂದಿದ್ದ ಎನ್ನಲಾಗಿದೆ.ಕೊರೊನಾ ಸೊಂಕಿನಿಂದ ಕಳೆದ 11 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಶರತ್ ನ ತಾಯಿ ಅವರ ನೋವನ್ನು ಹತ್ತಿರದಿಂದ ನೋಡಿದ್ದರಿಂದ ತೀವ್ರವಾಗಿ ಮನನೊಂದಿದ್ದ ಎನ್ನಲಾಗಿದೆ.
ಶರತ್ ಗೂ ಕೊರೊನಾ:ಆತ್ಮಹತ್ಯೆ ಮಾಡಿಕೊಂಡ ಶರತ್ ಮರಣೋತರ ಪರೀಕ್ಷೆ ನಡೆಸಿದ ವೇಳೆ ಈತನಿಗೂ ಸೂಂಕು ಇರುವುದು ಧೃಡಪಟ್ಟಿದೆ.ಇದೇ ಕಾರಣಕ್ಕೆ ಶವ ಸಂಸ್ಕಾರ ನಡೆಸಲು ಶನಿವಾರ ಸಂತೆಗೆ ತಂದ ವೇಳೆ ಅಂತ್ಯೆಕ್ರಿಯೆ ನಡೆಸಲು ಗ್ರಾಮದ ಒಂದು ವರ್ಗ ವಿರೋಧಿಸಿದೆ.

error: Content is protected !!