ಅಮೇರಿಕಾಗೆ ಉತ್ತರ ಕೊರಿಯಾ ಖಡಕ್ ಎಚ್ಚರಿಕೆ!

ಮಾಸ್ಕೋದಲ್ಲಿ ಉತ್ತರ ಕೊರಿಯಾದ ದೂತಾವಾಸರು ‘ಪರಮಾಣು ಶಕ್ತಿಯನ್ನು ಉಪಯೋಗಿಸಿ, ಅಮೇರಿಕಾದ ಮೇಲೆ ದಾಳಿ ನಡೆಸುತ್ತೇವೆ’ ಎಂದು ಖಡಕ್ ಎಚ್ಚರಿಕೆ ನೀಡಿದೆ.
ದಕ್ಷಿಣ ಕೊರಿಯಾದಲ್ಲಿ ಅಮೇರಿಕಾ ಸೇನೆ ಹಲವಾರು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವುದು ಉತ್ತರ ಕೊರಿಯಾಗೆ ತಿಳಿದು ಬಂದಿದೆ. ಉತ್ತರ ಕೊರಿಯಾ ಇತಿಹಾಸದಲ್ಲೇ ಅಚ್ಚಳಿಯದಂತಹ ಸಂಚಲನಕಾರಿ ಯುದ್ಧ ಮಾಡಲು ಸಿದ್ಧವಿದೆ. ಉತ್ತರ ಕೊರಿಯಾದ ಸುದ್ದಿಗೆ ಬಂದರೆ ಸಮರ್ಥ ಉತ್ತರ ನೀಡಬೇಕಾಗುತ್ತದೆ ಎಂದು ಸರ್ವಾಧಿಕಾರಿ ಕಿಮ್ ಜೋಂಗ್ ಉನ್ ಹುಂಕರಿಸಿದ್ದಾನೆ.