ಅಮಾನುಷವಾಗಿ ಗೋಹತ್ಯೆ ಎಸಗಿದ್ದ ಆರೋಪಿ ಬಂಧನ!

ಕೊಡಗು: ನೆಲ್ಲಹುದಿಕೇರಿ ಗ್ರಾಮದ ಬರಡಿಯ ಕಾಫಿ ತೋಟವೊಂದರಲ್ಲಿ ಗೋವು ಹತ್ಯೆ ಮಾಡಿ,ಅದರಿಂದ ಮಾಂಸ ತಯಾರಿಸಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಮತ್ತು ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಲ್ಲಿಗೆ ಸಮೀಪದ ಮೋಯ್ದುಕುಟ್ಟಿ ರಂಜಾನ್ ಹಬ್ಬದ ನಿಮಿತ ಗೋ ಮಾಂಸಕ್ಕೆ ಸಾಕಷ್ಟು ಬೇಡಿಕೆ ಇರುವುದರಿಂದ ಶಫೀಕ್ ಮತ್ತು ಇಬ್ಬರು ಒಳಗೊಂಡು ಈ ಕೃತ್ಯ ನಡೆಸಿದ್ದಾರೆ. ತಲಾ ಒಂದು ಕೆಜಿಯಂತೆ ಪ್ಯಾಕೆಟ್ ತಯಾರಿಸಿ ಮೋಯ್ದುಕುಟ್ಟಿ ಮಾರಾಟ ಮಾಡುತ್ತಿದ್ದ ಸಂದರ್ಭ ದಾಳಿ ನಡೆಸಲಾಗಿದೆ. ಮೋಯ್ದುಕುಟ್ಟಿಯನ್ನು ವಶಕ್ಕೆ ಪಡೆದಿದ್ದು, ಅಂದಾಜು 80 ಕೆಜಿ ಮಾಂಸ, ತಕ್ಕಡಿ, ಕೃತ್ಯಕ್ಕೆ ಬಳಸಿದ ಆಯುಧಗಳನ್ನು ವಶಕ್ಕೆ ಪಡೆಯಲಾಗಿದೆ. ದಾಳಿ ವೇಳೆ ಇತರೆ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ.