ಅಭ್ಯತ್ ಮಂಗಲದಲ್ಲಿ ಕಾಡಾನೆ ದಾಳಿ

ಕುಶಾಲನಗರ ತಾಲ್ಲೂಕಿನ ಅಭ್ಯತ್ ಮಂಗಲದಲ್ಲಿ ಕಾಡಾನೆಗಳು ದಾಂಧಲೆ ನಡೆಸಿದೆ. ಅಂಚೆಮನೆ ಸುಧಾಕರ್ ರಿಗೆ ಸೇರಿದ ಭತ್ತದ ಎರಡನೇ ಬೆಳೆ ಮತ್ತು ಹೂವು ಬಿಟ್ಟ ಕಾಫಿ, ಬಾಳೆ ಸೇರಿದಂತೆ ಮನೆಯ ಸುತ್ತಮುತ್ತಲಿನ ಹಣ್ಣಿನ ಗಿಡಗಳು ಸೇರಿದಂತೆ ಹಸುಗಳಿಗೆ ಮೇವಿಗಾಗಿ ಬೆಳೆಸಿದ್ದ ಹುಲ್ಲನ್ನು ನಾಶಪಡಿಸಿದೆ. ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಆನೆಗಳು ಅಡ್ಡಾಡಿಕೊಂಡು ಇದ್ದು ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಫಸಲು ನಾಶ ಮಾಡಿದೆ.

error: Content is protected !!