fbpx

ಅಭಿವೃದ್ಧಿಯ ಕುರಿತು ಅಭಿಪ್ರಾಯಿಸಲು ಅವಕಾಶ ಕಲ್ಪಿಸದಿದ್ದರೆ, ಹೇಗೆ ನಮ್ಮ ಭಾರತವನ್ನು “AatmaNirbhar” ಮಾಡುವುದು ?


✍️ ಕೊಚ್ಚಿ ಅನಿಂದಿತ್ ಗೌಡ

ಇತ್ತೀಚೆಗೆ (ಅಂದರೆ ಜೂನ್ 24, 2020 ರಂದು) ಸಾಕಷ್ಟು ಶ್ರಮದಿಂದ ಪುತ್ತೂರು ಹಾಗೂ ಸುಳ್ಯ ತಾಲೂಕನ್ನು ಜೋಡಿಸುವ (ನನ್ನ ಮೂಲ ಊರಿನ) ಸಮೀಪದ ಜಂಕ್ಷನ್ನಲ್ಲಿ ಬೀದಿ‌ ದೀಪವನ್ನು ಸ್ಥಾಪಿಸಲಾಯಿತು. ಅದನ್ನು ಸ್ಥಾಪಿಸಲು ಹೊರಟಾಗ ಆದ ಅನುಭವವು ನನ್ನನ್ನು ಬರೆಯಲು ಪ್ರೇರೇಪಿಸಿತು.ಕೆಲವು ವರ್ಷಗಳ ಹಿಂದೆ, 2020ರ ಹೊತ್ತಿಗೆ ರಾಷ್ಟ್ರಗಳ ಬೆಳವಣಿಗೆ ಎಂಬ ವಿಷಯದ ಕುರಿತು ಮಾತುಕತೆಗಳನ್ನು ಅನೇಕ ಸಂದರ್ಭಗಳಲ್ಲಿ ಕೇಳಲು ಸಿಗುತ್ತಿತ್ತು. ಆದರೆ ಬಾಯಿ ಮತ್ತು ಮೂಗನ್ನು ಕವರ್ ಮಾಡುವ ಮಾಸ್ಕ್ನ ಹಿಂದಿರುವ ಒಂದು ಬದುಕಾಗುತ್ತದೆ ಎಂದು ಯಾರೂ ಆಲೋಚಿಸಿದ ಪರಿಸ್ಥಿತಿ ಇಂದು ಎಲ್ಲರದ್ದೂ. Covid-19 ನಿಂದಾಗಿ ಅನೇಕ ರಾಷ್ಟ್ರಗಳು ಹಲವು ನಿರ್ದಿಷ್ಟ ಕ್ರಮಗಳನ್ನು ಕೈಗೊಂಡಿವೆ.

ನಮ್ಮೆಲ್ಲರ ಭಾರತವನ್ನು ಸ್ವಾವಲಂಬಿಯಾಗಿ ಮುನ್ನಡೆಸುವ ಪರಿಕಲ್ಪನೆಯನ್ನು ಪ್ರಧಾನಿ ಶ್ರೀ ಮೋದಿ ಜೀ ಅವರು ಮುಂದಿಟ್ಟಿದ್ದಾರೆ. ಒಂದೊಳ್ಳೆಯ ಚಿಂತನೆ ಎಂಬುದರಲ್ಲಿ ಎರಡು ಮಾತಿಲ್ಲ, ಆದರೆ ಚಿಂತನೆಯನ್ನು ಅನುಷ್ಠಾನ ಮಾಡುವುದು ಕೇವಲ ಪ್ರಧಾನಿಯೊಬ್ಬರದ್ದೇ ಕೆಲಸವಲ್ಲ.

ರಾಷ್ಟ್ರವನ್ನು ಬಲಪಡಿಸಲು ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯ.

ಸ್ವಾತಂತ್ರ್ಯವನ್ನು ಬ್ರಿಟಿಷರಿಂದ ಸ್ವಲ್ಪ ಹಿಂದೆಯೇ (ಅಂದರೆ 70 ವರ್ಷಗಳು ಕಳೆದರೂ) ಪಡೆದುಕೊಂಡಿದ್ದರೂ, ರಾಷ್ಟ್ರದ ಕೆಲವು ಪ್ರದೇಶಗಳು ಇನ್ನೂ ಅಭಿವೃದ್ಧಿಯ ಪರಿಕಲ್ಪನೆಯಿಂದಲೇ ದೂರವಿವೆ?

ಇದು ಯಾಕೆ ಹೀಗಾಯಿತು ಎಂದು ಪ್ರಶ್ನಿಸಿದರೆ ಸಿಗುವ ಪ್ರತಿಕ್ರಿಯೆ ಇವು: “ಇಲ್ಲ, ನೀನು ಹಾಗೆ ಮಾತನಾಡಬಾರದು. ನಿನ್ನ ಒಂದು ವೋಟಿನಿಂದ ಏನು ಆಗುವುದಿಲ್ಲ. ಬೇರೊಂದು ಪೇಟೆಯಲ್ಲಿ ಬೆಳೆದು, ಅಲ್ಲೇ ನೆಲೆಗೊಳಿಸಿ ದಂತೆ – ನಿನಗೆ ಇಲ್ಲಿ ಮಾತಾಡಲು ಹಕ್ಕು ಇಲ್ಲ. ಇದು ಬಾರಿ ಸ್ಪೀಡ್ ಆಯ್ತು.”

ಇಂತಹ ಮಾತುಗಳನ್ನು ಆಡುವವರು ರಾಷ್ಟ್ರದ “ಟುಕ್ಡೇ-ಟುಕ್ಡೇ” ಮಾಡುತ್ತೇವೆ ಎಂದವರಿಗೆ ಏನನ್ನು ಹೇಳುವುದಿಲ್ಲ, ಆದರೆ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಯಾಗಬೇಕು ಎನ್ನುವವರನ್ನು “ಜಾಸ್ತಿ ಮಾತನಾಡುವ ರಾಷ್ಟ್ರದ ವಿರೋಧಿ” ಎಂಬ ಸುಳ್ಳು ಆರೋಪದಡಿ ಬೆಂಕಿಯ ವೇಗದಲ್ಲಿ ಪ್ರಚಾರ ಮಾಡಿಬಿಡುತ್ತಾರೆ. ಆಂಗ್ಲ ಭಾಷೆಯಲ್ಲಿ (ಅದರಲ್ಲೂ ಕಾನೂನಿನಲ್ಲಿ) ಇದನ್ನು “Defamation” ಎಂದೂ ಕರೆಯಬಹುದಾಗಿದೆ.

ಈ ಸಂದರ್ಭದಲ್ಲಿ ಉಂಟಾಗುವ ಸವಾಲುಗಳು ಯಾವುದೆಂದರೆ: ಈ ರೀತಿ ಮಾತನಾಡುವವರು ನೈಜವಾಗಿ ರಾಷ್ಟ್ರಾಭಿಮಾನವನ್ನು ಹೊಂದಿರುವ ಯುವಕ/ಯುವತಿಯರನ್ನು ಉದ್ದೇಶಪೂರ್ವಕವಾಗಿ ವಿಪಥಗೊಳಿಸಲು ಯತ್ನಿಸುತ್ತಿದ್ದಾರಾ ?

ದ್ವಂದ್ವದ ವಿಚಾರ ಏನೆಂದರೆ ಇಂತಹವರು ತಾವೇ ವಾಸಿಸುವ ಭಾರತ ರಾಷ್ಟ್ರದ ಅಭಿವೃದ್ಧಿಯ ಪಥವನ್ನು ಹಿಡಿಯುವ ವೇಗವನ್ನು ಬಲವಂತವಾಗಿ ಕಡಿಮೆಗೊಳಿಸಿದಂತೆ, ಅಲ್ಲವೇ ?

ಇಂತಹಾ ಕಾರ್ಯಗಳಿಂದ ಒಂದು ರಾಷ್ಟ್ರವನ್ನೇ ಬೆಳವಣಿಗೆಯಿಂದ ದೂರ ತಳ್ಳಿದ ಹಾಗೆ, ಆಗುವುದಿಲ್ಲವೇ !

ಹಾಗಾದರೆ ಇಲ್ಲಿ ಅಪರಾಧಿ ಯಾರು, ಗುಲಾಮರು ಯಾರು, ರಾಷ್ಟ್ರ ದ್ರೋಹಿ ಯಾರು ಅಥವಾ ನಿಜವಾದ ರಾಷ್ಟ್ರ- ಭಕ್ತ ಯಾರೆಂಬುದೇ ದೊಡ್ಡ ಪ್ರಶ್ನೆಯಾಗಿದೆ.

ಇಂತಹದ್ದನ್ನು ನೋಡುವಾಗ, ನಾವೆಲ್ಲರೂ ನಿಜವಾಗಿಯೂ ಗುಲಾಮಗಿರಿಯಿಂದ ಹೊರಬಂದಿದ್ದೇವಾ ಅಥವಾ ದ್ವಂದ್ವಗಳ ನಡುವೆ ಇನ್ನೂ ಸಿಲುಕಿಕೊಂಡಿದ್ದೇವಾ ಅಂತಾ ಒಮ್ಮೊಮ್ಮೆ ಅನ್ನಿಸುವುದು ಉಂಟು !

ಒಂದು ಊರು (ಅದು ನಮ್ಮ ರಾಷ್ಟ್ರದ ಯಾವುದೇ ಮೂಲೆಯಲ್ಲಿ ಇರಲಿ) ಅಭಿವೃದ್ದಿಯನ್ನು ಹೊಂದಬೇಕು ಎಂಬ ಆಕಾಂಕ್ಷೆಗಳನ್ನು ಇಟ್ಟುಕೊಂಡರೆ ಮೇಲೆ ಬರೆದ ಕೆಲ ಅನುಭವಗಳ ದರ್ಶನ ಸಿಕ್ಕರೆ, ಇನ್ನೊಂದು ವಿಚಾರ ಏನೆಂದರೆ ಕೆಲ ಭಾಷಣಾಕಾರರ ವೇದಿಕೆಯಿಂದ ನಿರ್ಗಮಿಸಿದ ನಂತರದಲ್ಲಿ ಅವರ ವರ್ತನೆಯಲ್ಲಿನ ಬದಲಾವಣೆಗಳು !

ಆದನ್ನು ಎದುರಿಸುವಾಗ “ಅವಸ್ಥೆಯೇ – ಛೇ!” ಅನಿಸಿದರೂ, ವಾಸ್ತವಿಕ ನೆಲೆಯಿಂದ ಒಬ್ಬ ವ್ಯಕ್ತಿ ಓಡಿ ಹೋಗಬಾರದು!

ಅಲ್ಲಿ ಭಾಷಣೆಯಲ್ಲಿ ಮಾತ್ರ ಅಷ್ಟು-ಇಷ್ಟು ಅನುದಾನ ಬಂದಾಯಿತು, ಆದರೆ ವಾಸ್ತವಿಕ ನೆಲ ಅಂದರೆ ಆ ಊರಿನಲ್ಲಿ ಘೋಷಣೆಯಾದ ಅನುದಾನ ಎಲ್ಲಿಗೆ ಹೋಯಿತೆಂದು ಹುಡುಕಬೇಕಾದ ಪರಿಸ್ಥಿತಿ (ವ್ಯಂಗ್ಯ ಅಲ್ಲ, ಸತ್ಯ ವಿಚಾರ‌. ಇದರಿಂದಾಗಿ ಸಮಸ್ಯೆ ಅನುಭವಿಸುವವರು ಹಲವಾರು ಜನರು ಇಂದಿಗೂ ಇದ್ದಾರೆ, ಇದನ್ನು ಹೇಳಲು-ಬರೆಯಲು ತುಂಬಾ ಬೇಜಾರು ಆಗುತ್ತದೆ).

ಇನ್ನು ಕೆಲವರದ್ದು ಅದೇನೋ ಹೋರಾಟವಂತೆ!

ಆದರೆ ಕಳೆದ 10-20 ವರ್ಷಗಳಿಂದ ಈಚೆಗೆ ನೋಡಿದರೆ ಕಾಲಿ ಮರ, ಗಿಡ ಮತ್ತು ಮಣ್ಣೇ ನೋಡಲು ಸಿಗುವುದು. (ಹಾ, ಕೆಲವು ಕಡೆ ವೈನ್ ಶಾಪ್ ಒಂದು ಬಿಟ್ಟರೆ ಅಲ್ಪ ಸ್ವಲ್ಪ ಕಾರ್ಯಗಳಾದರೂ, ಅದರ ಗುಣಮಟ್ಟ ಪ್ರಶ್ನಾರ್ಹವಾಗಿದೆ).

ಈ ಕೆಲವರದ್ದು ಯಾವ ಹೋರಾಟವೆಂದು ನಮಗಂತೂ ತಿಳಿಯದು, ಆದರೆ 1837 ರಂದು ಹೆಮ್ಮೆಯಿಂದ ಹೇಳುತ್ತೇನೆ, ನಮ್ಮೂರ ಹಿರಿಯರು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಟವನ್ನು ಮಾಡಿದ್ದು, ಅದು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ.

ದುಃಖಕರ ಸಂಗತಿ ಏನೆಂದರೆ ವೀರರು ಮಾಡಿದ ಹೋರಾಟದ ನೆನಪಿಗಾದರೂ 183 ವರ್ಷಗಳು ಕಳೆದರೂ ಒಂದು ಸ್ಮಾರಕ ಇಲ್ಲ ಮತ್ತು ಈ “ಹೋರಾಟಗಾರರನ್ನು” ದರೋಡೆಕೋರರೆಂದು ಪ್ರಚಾರ ಮಾಡಿದ್ದು ಇನ್ನೂ ಬೇಜಾರು!

ಎಷ್ಟು ಹೇಳಿದರೂ (ಸಾಕ್ಷಿ ಸಮೇತ) ಆ ಬ್ರಿಟಿಷರನ್ನು ನಕಲು ಮಾಡುವುದರಲ್ಲೇ ಕಾಲ ಕಳೆಯುವುದರಲ್ಲಿ ಆಯ್ತು, ಇದು
“ನಿಜವಾದ ಹೋರಾಟಕ್ಕೆ” ಅನ್ಯಾಯ.

ಇಂದು ಕೂಡ ಬೇರೆಯೇ ರೂಪದಲ್ಲಿ ಅನ್ಯಾಯಗಳ ಸರಣಿಯೇ ಮುಂದುವರೆದಂತಿದೆ‌.

Basic infrastructure ಇಲ್ಲದೇ ಇರುವುದರಿಂದ ಪರಿಣಾಮ ಅನುಭವಿಸುವುದು (ಪೊಲಿಟಿಕ್ಸ್ ಅಲ್ಲ ಡರ್ಟಿ ಪಾಲಿಟಿಕ್ಸ್, ದಯವಿಟ್ಟು ಅರ್ಥಮಾಡಿಕೊಳ್ಳಿ) ರಾಜಕೀಯ ಮಾಡುವವರಲ್ಲ, ಬೆಳೆಯಬೇಕಾದ ಊರಿನ ಮಕ್ಕಳು.

ಮಕ್ಕಳು, ವಿದ್ಯಾರ್ಥಿಗಳು ಯಾವ ಮನೆ
ಮನೆನಲ್ಲಿ ಇಲ್ಲ, ಹೇಳಿ ?

ಮಕ್ಕಳು ಯಾವ ತಪ್ಪನ್ನು ಮಾಡಿದ್ದಾರೆ ?

ನೇರವಾಗಿ ಹೇಳುವುದಾದರೆ, ಇದೇ ತರಹದ ಆಟಗಳು (ಒಬ್ಬರು ಇನ್ನೊಬ್ಬರ ಹೆಸರನ್ನೇ ಹೇಳುವುದು) ಮುಂದುವರಿದರೆ ಗತಿ ಏನು ?

ಈಗಾಗಲೇ ನೆಟ್ವರ್ಕ್ಗಾಗಿ ಗುಡ್ಡೆ/ಮರಗಳನ್ನು ಹತ್ತಿದ್ದು, ಕಾಡೊಳಗೆ ಹೋದದ್ದನ್ನೆಲ್ಲಾ ಕೆಲವರು ಅನುಭವಿಸಿದ್ದಾಯಿತು.

ವಿದ್ಯಾರ್ಥಿಗಳಿಗೆ ಏನಾದರೂ ಹೆಚ್ಚು-ಕಡಿಮೆ ಆದರೆ, ಪೇಟೆಯಲ್ಲಿನ ಕೆಲ ವ್ಯಕ್ತಿಗಳು (ಗ್ರಾಮೀಣ ಭಾಗದವರು ಕೇವಲ “ನೆಪ ಒಡ್ಡುತ್ತಿದ್ದಾರೆ” ಅನ್ನುವವರೇ) ಇದರ ಜವಾಬ್ದಾರಿಯನ್ನು ವಹಿಸಲು ಸಿದ್ಧರಿರುವಿರಾ, ನಿಮಗೆ ಇದು ನೇರ ಸವಾಲು. ಇನ್ನುಮುಂದೆ ಸ್ಟೇಟ್ಮೆಂಟ್ ಕೊಡುವ ಮುಂಚೆ ಸ್ವಲ್ಪ ಯೋಚಿಸಿ !

ಇನ್ನು ಈ ಕೆಲವು ವಿಶೇಷ ವರ್ಗದವರು ( ಅಂದರೆ ಕುರ್ಚಿಯಲ್ಲಿ ಕುಳಿತುಕೊಳ್ಳುವವರು) ಅಭಿವೃದ್ದಿ ಎಂದು ಕೇಳಲು ಬರುವವರು (ಭಾರತದ ನಾಗರೀಕರನ್ನು) Harassment ಮಾಡುವುದು ಮುಂದುವರಿಸುತ್ತೀರಾ ಅಥವಾ ಸರ್ವಾಂಗೀಣ ಅಭಿವೃದ್ಧಿಯ ಕಡೆಗೆ ಎಲ್ಲರೊಂದಿಗೆ ಕೈ ಜೋಡಿಸುತ್ತೀರಾ ? ಹಲವು ಘಟನೆಗಳು ನಡೆದಿವೆ, ಇಲ್ಲಿ ಅದರ ವಿವರಣೆಯೊಂದಿಗೆ ಸಮಯವನ್ನು ವ್ಯರ್ಥ ಮಾಡುವುದು ಅಗತ್ಯವಿಲ್ಲ.

ಅಭಿಪ್ರಯಿಸುವುದಾದರೆ, ಕೆಲ ಭಾಗಗಳಲ್ಲಿ ಅಭಿವೃದ್ಧಿ ಬಾರಿ ಸ್ಲೋ (ವೇಗದಲ್ಲಿ ಕೊಂಚ ಕಮ್ಮಿ) ಆಗಿದೆ. ಕಾರಣಗಳು ಹಲವಾರು ಇರಬಹುದು (ಇಲ್ಲದಿರಬಹುದು ಕೂಡಾ! ಸಾಕ್ಷಿ ಇಲ್ಲದಿದ್ದರೆ ಇಲ್ಲಿ ಊಹಿಸುವುದು ಅಗತ್ಯವಿಲ್ಲ).

ನೆಗೆಟಿವ್ ಆಗಿ ಈ ಬರವಣಿಗೆಗೆ ವಿರಾಮ ನೀಡುವುದಿಲ್ಲ. ಇಷ್ಟರವರೆಗೆ ತಿಳಿಸಿದು ವಾಸ್ತವಿಕತೆಯನ್ನೇ. ಹಾಗಾದರೆ ಇದರರ್ಥ ಅಭಿವೃದ್ಧಿಯನ್ನು ಕೇಳುವುದು ಒಂದು ಸಾಹಸ ಕ್ರೀಡೆ ಅಥವಾ ಹೆವಿ ರಿಸ್ಕ್ ಕೆಲಸ ಅಂಥಾ ತಾರತಮ್ಯ ಮಾಡಲು ಎಂದು ಎನಿಸುವುದು ಬೇಡಾ (ಕೇಳಿ ಪಡೆದುಕೊಳ್ಳುವುದು ನಮ್ಮೆಲ್ಲರ ಸಾಂವಿಧಾನಿಕ ಹಕ್ಕು).

ಪ್ರಾರಂಭದಲ್ಲೇ ಹೇಳಿದಂತೆ, ರಾಷ್ಟ್ರವನ್ನು ಬಲಪಡಿಸಲು ಕೈಜೋಡಿಸುವುದು ನಮ್ಮೆಲ್ಲರ ಕರ್ತವ್ಯ. ಈ ಧ್ಯೇಯವೇ ಸ್ಫೂರ್ತಿ.

ಎರಡು ತಾಲೂಕುಗಳ ಸಮೀಪದ ಒಂದು ಜಂಕ್ಷನ್ ನಲ್ಲಿ ದಾರಿ ದೀಪವನ್ನು ಅಳವಡಿಸುವಲ್ಲಿ ಜಿ.ಪಂ.ಸದಸ್ಯರಾದ ಶ್ರೀ ಎಸ್.ಎನ್. ಮನ್ಮಥ ಅವರು ಹಾಗೂ ಐವರ್ನಾಡು ಗ್ರಾಮ ಪಂಚಾಯತಿಯ P.D.O. – ಯು.ಡಿ. ಶೇಖರ್ ಅವರು ಅಭಿವೃದ್ಧಿಯ ಕುರಿತು ಅಭಿಪ್ರಾಯಿಸಲು ಅವಕಾಶ ಕಲ್ಪಿಸಿದ್ದಲ್ಲದೇ, ಹಿರಿಯರಾಗಿ ಕೆಲ ಅನುಭವವನ್ನು ಹಂಚಿಕೊಂಡು, ದಾರಿ ದೀಪದ ಅಳವಡಿಕೆಯಲ್ಲಿ ಸಕ್ರೀಯ ಪಾತ್ರ ವಹಿಸಿದ್ದಕ್ಕೆ ಅವರಿಗೆ ಧನ್ಯವಾದಗಳು. ಸಿಹಿ, ಆಶಾವಾದಿ ಹಾಗೂ ಸಕಾರಾತ್ಮಕ ದ್ರಷ್ಟಿಯಿಂದ ಹಾಗೂ ರಾಷ್ಟ್ರದ ಪ್ರಾಥಮಿಕ ಅಭಿಪ್ರಾಯಗಳಲ್ಲಿ (basic unit)
ಒಂದಾದ ಗ್ರಾಮಗಳ ಅಭಿವೃದ್ಧಿಯು ಇನ್ನೂ ಮುಂದುವರೆಯಲಿ ಎಂದು ಪ್ರಾರ್ಥಿಸುತ್ತಾ, ಈ ಬರಹಕ್ಕೆ ನಾನು ಪೂರ್ಣ ವಿರಾಮವನ್ನು ನೀಡುತ್ತೇನೆ.

ಜೈ ಭಾರತ 🇮🇳

✍️ ಕೊಚ್ಚಿ ಅನಿಂದಿತ್ ಗೌಡ

error: Content is protected !!