ಅಭಿಮಾನಿಗಳನ್ನು ಕಂಡು ಭಾವುಕರಾದ ಅಮಿಷಾ ಪಟೇಲ್

ಬಾಲಿವುಡ್​ ನಟಿ ಅಮಿಷಾ ಪಟೇಲ್​ ಬೆಳ್ಳಿ ತೆರೆಯಿಂದ ದೂರಾಗಿ ಬಹಳ ಸಮಯವೇ ಕಳೆದಿದೆ. ಹೀಗಾಗಿ ಅಮೀಷಾ ಅಭಿಮಾನಿಗಳು ನೆಚ್ಚಿನ ನಟಿಯ ಅಭಿಯನವನ್ನ ಮಿಸ್​ ಮಾಡಿಕೊಳ್ತಿದ್ದಾರೆ.

ನೆಚ್ಚಿನ ನಟಿಯ ಅಭಿಯನದ ಮೊದಲ ಸಿನಿಮಾ ಕಹೋ ನಾ ಪ್ಯಾರ್​​ ಹೈ ನ ಹಾಡಿಗೆ ವಿಮಾನ ಯಾನ ಸಿಬ್ಬಂದಿ ಹೆಜ್ಜೆ ಹಾಕಿದ್ದು ಇದನ್ನ ನೋಡಿದ ಅಮಿಷಾ ಕಣ್ಣಂಚು ಒದ್ದೆಯಾಗಿದೆ.

ಕೂಡಲೇ ವಿಮಾನಯಾನ ಸಿಬ್ಬಂದಿ ಜೊತೆ ಸೇರಿಕೊಂಡ ನಟಿ ಅವರ ಜೊತೆ ಡ್ಯಾನ್ಸ್ ಮಾಡಿದ್ರು. ಅಮಿಷಾ ಟ್ರ್ಯಾಕ್​ ಪ್ಯಾಂಟ್​​ ಹಾಗೂ ಆಕಾಶ ಬಣ್ಣದ ಜಾಕೆಟ್​​ನ್ನ ಹಾಕಿಕೊಂಡಿದ್ದಾರೆ. ಕೊರೊನಾ ಮಾರ್ಗಸೂಚಿಗಳನ್ನ ಗಮನದಲ್ಲಿಟ್ಟಿರುವ ಅಮಿಷಾ ಮಾಸ್ಕ್​ ಹಾಗೂ ಗ್ಲೌಸ್​ ಧರಿಸಿರೋದನ್ನ ನೋಡಬಹುದಾಗಿದೆ.

error: Content is protected !!