ಅಬ್ಬರಿಸಿ ಬೊಬ್ಬಿರಿದ ಮಳೆರಾಯನಿಂದ ಜನರು ತತ್ತರ

ಕೊಡಗು ಜಿಲ್ಲೆಯಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿದಿದ್ದಾನೆ. ಸಂಜೆಯಾಗುತ್ತಿದ್ದಂತೆ ಕಾವೇರಿ ಲೇಔಟ್, ಹಳೇ ಖಾಸಗಿ ಬಸ್ ನಿಲ್ದಾಣ, ಪತ್ರಿಕಾಭವನ ಸೇರಿದಂತೆ ಹಲವೆಡೆ ಕೆಲವೇ ಗಂಟೆಗಳು ಸುರಿದ ಮಳೆಗೆ, ಎರಡು ದಿನದ ಹಿಂದೆ ಬೆಂಗಳೂರು ಭಾಗದಲ್ಲಿ ಕಂಡು ಬಂದ ಪ್ರವಾಹದ ಪ್ರತಿಯಂತಿತ್ತು. ವಾಹನಗಳು ಮುಳುಗಡೆಯಾದ ದೃಶ್ಯ ಕಂಡು ಬಂತು.


ಕುಶಾಲನಗರ ಭಾಗದ ಪಟ್ಟಣದಲ್ಲಿ ಮೈಸೂರು ಮಡಿಕೇರಿ ರಸ್ತೆಯಲ್ಲಿನ ಮುಳುಗಡೆ, ಸರ್ಕಾರಿ ಹಿರಿಯ ಪ್ರಾಥಮಿಕ ತಡೆಗೋಡೆ ಕುಸಿತದ, ಬಸ್ ನಿಲ್ದಾಣ, ಸೇರಿದಂತೆ ಕೆಲವು ಲೇಔಟ್ ನಲ್ಲಿ ನೀರು ನುಗ್ಗಿದೆ.