fbpx

ಅಫಘಾನಿಸ್ಥಾನದಲ್ಲಿ ಏರ್ ಸ್ಟೈಕ್: 200 ಉಗ್ರರು ಮಠಾಷ್!

ಕಾಬೂಲ್: ಅಫ್ಘಾನಿಸ್ಥಾನದಲ್ಲಿ ಆಕ್ರಮಣ ನಡೆಸುತ್ತಿರುವ ತಾಲಿಬಾನ್ ಉಗ್ರರನ್ನು ಗುರಿಯನ್ನಾಗಿಸಿ ಶನಿವಾರ ಸಂಜೆ ಏರ್ ಸ್ಟ್ರೈಕ್ ಮಾಡಲಾಗಿದೆ. ಘಟನೆಯಲ್ಲಿ 200ಕ್ಕೂ ಹೆಚ್ಚು ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಅಫ್ಘಾನ್ ಮಿಲಿಟರಿ ಹೇಳಿದೆ.

ತಾಲಿಬಾನ್ ತನ್ನ ನಿಯಂತ್ರಣಕ್ಕೆ ಪಡೆದುಕೊಂಡಿದ್ದ ಶೆಬೆರ್ಗಾನ್ ನಗರದಲ್ಲಿನ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ.

ವಾಯುಪಡೆಗಳು ಉಗ್ರರು ಒಟ್ಟು ಸೇರುವ ಜಾಗ ಮತ್ತು ಅಡಗು ತಾಣಗಳನ್ನು ಗುರಿಯಾಗಿಸಿಕೊಂಡು ನಡೆಸಿದ ವೈಮಾನಿಕ ದಾಳಿಯಲ್ಲಿ ನಂತರ 200 ಕ್ಕೂ ಹೆಚ್ಚು ಭಯೋತ್ಪಾದಕ ತಾಲಿಬಾನ್‌ಗಳನ್ನು ಹತ್ಯೆ ಮಾಡಲಾಗಿದೆ. ವೈಮಾನಿಕ ದಾಳಿಯ ಪರಿಣಾಮವಾಗಿ ಅವರ ಹೆಚ್ಚಿನ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಮತ್ತು ಅವರ 100 ಕ್ಕೂ ಹೆಚ್ಚು ವಾಹನಗಳು ನಾಶವಾಗಿವೆ ಎಂದು ಅಫ್ಘಾನ್ ರಕ್ಷಣಾ ಸಚಿವಾಲಯದ ಅಧಿಕಾರಿ ಫವಾದ್ ಅಮನ್ ಟ್ವೀಟ್ ಮಾಡಿದ್ದಾರೆ.

” ಸಂಜೆ 6: 30 ಕ್ಕೆ ಜಾವ್ಜಾನ್ ಪ್ರಾಂತ್ಯದ ಶೆಬೆರ್ಗಾನ್ ನಗರದಲ್ಲಿ ತಾಲಿಬಾನ್ ಕೂಟವನ್ನು ಬಿ -52 ಗುರಿಯಾಗಿಸಿಕೊಂಡು ದಾಳಿ ಮಾಡಿದೆ. ಯುಎಸ್ ವಾಯುಪಡೆಯ ದಾಳಿಯ ಪರಿಣಾಮವಾಗಿ ಭಯೋತ್ಪಾದಕರು ಭಾರೀ ಸಾವುನೋವುಗಳನ್ನು ಅನುಭವಿಸಿದ್ದಾರೆ” ಎಂದು ಫವಾದ್ ಅಮನ್ ಟ್ವೀಟ್ ಮಾಡಿದ್ದಾರೆ.

error: Content is protected !!