ಅಪ್ರಾಪ್ತ ಯುವಕರ ಬೈಕ್ ಚಾಲನೆಗೆ ಬಿತ್ತು ದೊಡ್ಡ ಮೊತ್ತದ ದಂಡ!

ಕಳೆದ ಆಗಸ್ಟ್ 14 ರ ಭಾನುವಾರ ನಾಪೋಕ್ಲು ಪಟ್ಟಣದಲ್ಲಿ ಪೊಲೀಸರಿಂದ ವಾಹನ ತಪಾಸಣೆ ವೇಳೆ ಸಿಕ್ಕಿಬಿದ್ದ ಅಪ್ರಾಪ್ತ ವಯಸ್ಸಿನ ಯುವಕರನ್ನು ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನುಪ್ ಮಾದಪ್ಪ ನವರು ನಾಪೋಕ್ಲುವಿನಲ್ಲಿ ವಾಹನ ತಪಾಸಣೆ ಮಾಡುವ ವೇಳೆ
2 ಬೈಕಿನಲ್ಲಿ ಬಂದ ಅಪ್ರಾಪ್ತ ಯುವಕರನ್ನು ಪೊಲೀಸರು ಹಿಡಿದಿದ್ದು , ಬೈಕ್ ಮಾಲೀಕರಿಗೆ ತಲಾ 30 ಸಾವಿರ ರೂಪಾಯಿಯ ಭಾರಿ ಮೊತ್ತದ ದಂಡವನ್ನು ನ್ಯಾಯಾಲಯ ವಿಧಿಸಿದೆ.
ಬೈಕ್ ಮಾಲೀಕರು ಸ್ಥಳೀಯ ಚೆರಿಯಪರಂಬು ಹಾಗೂ ನಾಪೋಕ್ಲು ನಿವಾಸಿಗಳು ಎಂದು ತಿಳಿದು ಬಂದಿದ್ದು,ಇನ್ನು ಮುಂದೆಯಾದರು ಪೋಷಕರು ಅಪ್ರಾಪ್ತ ಮಕ್ಕಳಿಗೆ ದ್ವಿಚಕ್ರವಾಹನ ಕೊಡುವಾಗ ಎಚ್ಚರವಹಿಸಿ. ಇಲ್ಲದಿದ್ದರೆ ಭಾರಿ ದಂಡ ಕಟ್ಟಬೇಕಾದ ಪರಿಸ್ಥಿತಿ ಬರಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿ.