ಅಪ್ಪಯ್ಯ ಗೌಡರ ಸ್ಮರಣಾರ್ಥ ಅಂಚೆ ಲಕೋಟೆ ಬಿಡುಗಡೆ!

1837 ರ ಅಮರ ಸುಳ್ಯ ಧಂಗೆಯ ಸ್ವಾತಂತ್ರ್ಯ ಸಂಗ್ರಾಮದ ನೇತೃತ್ವ ವಹಿಸಿದ್ದ ಗುಡ್ಡೆಮನೆ ಅಪ್ಪಯ್ಯ ಗೌಡರ ಸ್ಮರಣಾರ್ಥ, ಹೋರಾಟದ ನೆನಪಿನಲ್ಲಿ ಅಂಚೆ ಲಕೋಟೆ ಹೊರ ಬಂದಿದೆ.

ಅಪ್ಪಯ್ಯ ಗೌಡರ ಸಾಹಸ ಗಾಥೆಯನ್ನು ಒಳಗೊಂಡ ಲಕೋಟೆಯನ್ನು ಕನ್ನಡ ಅರೆಭಾಷೆ ಸಾಹಿತ್ಯ ಅಕಾಡೆಮಿ ಸಾರರ್ಥ್ಯದಲ್ಲಿ ಸಿದ್ದಗೊಂಡಿದ್ದು, ವಿಶೇಷ ವಿನ್ಯಾಸದಿಂದ ಕೂಡಿದೆ.

ಮಡಿಕೇರಿಯ ಅಂಚೆಕಚೇರಿಯಲ್ಲಿ ಈ ವಿಶೇಷ ಲಕೋಟೆ ಬಿಡುಗಡೆ ಮಾಡಲಾಗಿದ್ದು,ರಾಜ್ಯದ ಎಲ್ಲಾ ಅಂಚೆ ಕಛೇರಿಯಲ್ಲಿ ಲಭ್ಯವಿದೆ.

error: Content is protected !!