ಅಪಘಾತದಲ್ಲಿ ಹಿರಿಯ ವೈದ್ಯ ಸಾವು

ಕೊಡಗು: ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರವೀಂದ್ರನ್ 58 ಅಪಘಾತದಲ್ಲಿ ಸಾವನಪ್ಪಿರುವ ಘಟನೆ ನಡೆದಿದೆ.ಹುಣಸೂರು ಸಮೀಪದ ಚಿಲ್ಕುಂದದಲ್ಲಿ ಈ ಘಟನೆ ನಡೆದಿದ್ದು,ಮೈಸೂರಿನ ಆಸ್ಪತ್ರೆಗೆ ತೆರಳುವ ಮಾರ್ಗ ಮದ್ಯೆ ಸಾವನಪ್ಪಿದ್ದಾರೆ.

ಕಾರಿನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು ಮಗುಚಿಕೊಂಡಿದೆ.ಇತ್ತೀಚೆಗೆ ತಮ್ಮ ತಾಯಿ ತೀರಿಕೊಂಡ ಹಿನ್ನಲೆಯಲ್ಲಿ ಕ್ರಿಯೆಗಳನ್ನು ಮುಗಿಸಿ, ಕುಟುಂಬ ಸಮೇತ ಮೈಸೂರಿನಿಂದ ಸೋಮವಾರಪೇಟೆಗೆ ಕರ್ತವ್ಯಕ್ಕೆ ತೆರಳುವ ವೇಳೆ ಘಟನೆ ಸಂಭವಿಸಿದೆ.

ಮೃತ ಡಾ.ರವೀಂದ್ರನ್ ಸಹೋದರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪತ್ನಿ ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.