ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಕುಶಾಲನಗರ ರಸ್ತೆ ನಡುವೆ ಬೈಕ್ ಅಪಘಾತವಾಗಿದ್ದು, ಮರಗೋಡು ಸಮೀಪದ ಐಕೊಳ ಗ್ರಾಮದ ದಯಾನಂದ(48) ಎಂಬುವವರು ಗಂಭೀರ ಗಾಯಗೊಂಡ ಪರಿಣಾಮ, ಮೈಸೂರಿನ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಮೃತಪಟ್ಟಿದ್ದಾರೆ. ಅಪಘಾತ ಸ್ಥಳದಲ್ಲಿದ್ದ ಬೈಕು ಸಿದ್ದಾಪುರ ಪೊಲೀಸರು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.