ಅಪಘಾತಕ್ಕೊಳಗಾಗಿ ಎರಡು ಜಾನುವಾರುಗಳು ಮೃತ

ಅನೆಕಾಡು-ಗುಡ್ಡೆಹೊಸೂರು ಹೆದ್ದಾರಿ ಮಧ್ಯೆ ಅಡ್ಡಾಡುವ ರಾಸುಗಳಿಂದಾಗಿ ವಾಹನ ಸವಾರರಿಗೆ ಈ ಹಾದಿಯಲ್ಲಿ ಸಂಚರಿಸುವುದೇ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಹಲವಾರು ಅಪಘಾತಗಳೂ ಕೂಡ ಮೇಲಿಂದ ಮೇಲೆ ಸಂಭವಿಸುತ್ತಿದೆ.

ಹಲವು ಬಾರಿ ಎಚ್ಚರಿಕೆ ನೀಡಿದರೂ ಕ್ಯಾರೆ ಅನ್ನದ ಮಾಲೀಕರು ತಮ್ಮ ಹಸುಗಳನ್ನು ಬೇಕಾ ಬಿಟ್ಟಿ ರಸ್ತೆಯಲ್ಲಿ ಅಡ್ಡಾಡಲು ಬಿಡುತ್ತಿದ್ದಾರೆ. ಹಲವು ಬಾರಿ ವಾಹನಗಳ ಅಪಘಾತ ನಡೆದು ಜಾನುವಾರುಗಳ ಜೀವ ಹಾನಿ ಆಗಿದ್ದರೂ ಕೂಡ ಅಪರಿಚಿತ ವಾಹನಕ್ಕೆ ಡಿಕ್ಕಿಯಾಗಿ ಮತ್ತೆ ಎರಡು ಜಾನುವಾರುಗಳು ದುರ್ಮರಣ ಹೊಂದಿವೆ. ಅಪಘಾತಕ್ಕೊಳಗಾಗಿ ತೀವ್ರವಾದ ಗಾಯಗಳಿಂದ ಅಸುನೀಗಿದ ಹಸುಗಳ ದಾರೂಣ ಸ್ಥಿತಿ ಎಂಥವರಲ್ಲೂ ಮರುಕ ಹುಟ್ಟುವಂತಿತ್ತು.

error: Content is protected !!