fbpx

ಅನಾಥವಾಗಿದೆ ಕೆ.ಎಸ್.ಆರ್.ಟಿ.ಸಿ. ಬಸ್

ಸೋಮವಾರಪೇಟೆ – ಶನಿವಾರಸಂತೆ ಹೆದ್ದಾರಿ ನಡುವಿನ ಹೊನ್ನವಳ್ಳಿ ತಿರುವಿನಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಕೆಟ್ಟುನಿಂತಿದ್ದು, ಇದರತ್ತ ಸಂಬಂಧಿಸಿದವರು ತಿರುಗಿ ನೋಡದ ಕಾರಣ ಅನಾಥವಾಗಿದೆ. ಬೆಂಗಳೂರು ಡಿಪ್ಪೊಕ್ಕೆ ಸೇರಿರುವ ಈ ಬಸ್ ಕಳೆದ ಮೂರು ದಿನಗಳ ಹಿಂದೆ ಹೊನ್ನವಳ್ಳಿ ತಿರುವಿನ ರಸ್ತೆ ಮಧ್ಯದಲ್ಲಿ ಕೆಟ್ಟು ನಿಂತಿದೆ.

ಆದರೆ ಇದನ್ನು ಇನ್ನೂ ಸರಿಪಡಿಸಿ ಅಲ್ಲಿಂದ ಕೊಂಡೊಯ್ಯದ ಪರಿಣಾಮ ಇತರೆ ವಾಹನಗಳ ಸಂಚಾರಕ್ಕೆ‌ ತೊಡಕ್ಕಾಗಿದೆ ಎಂದು ಸೋಮವಾರಪೇಟೆ ತಾಲ್ಲೂಕು ಶಿವರಾಮೇಗೌಡರ ಬಣದ ಕ.ರ.ವೇ. ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ ಅವರು ತಿಳಿಸಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಕೆಟ್ಟು ನಿಂತಿರುವ ಬಸ್ ಅನ್ನು ದುರಸ್ತಿಪಡಿಸಲು ಕ್ರಮಕೈಗೊಂಡು ಅದನ್ನು ತೆರವುಗೊಳಿಸಲಿ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

error: Content is protected !!