ಅನಾಗರೀಕತೆ ಮೆರೆಯುತ್ತಾ ತ್ಯಾಜ್ಯ ಬಿಸಾಕಿ, 2500 ದಂಡ ಕಟ್ಟಿದ ಭೂಪ!

ರಸ್ತೆ ಬದಿಯಲ್ಲಿ ತ್ಯಾಜ್ಯ ವಸ್ತುಗಳನ್ನು ಬಿಸಾಕಿದಕ್ಕಾಗಿ ವ್ಯಕ್ತಿಯೊಬ್ಬರಿಗೆ 2500 ದಂಡ ವಿಧಿಸಿದ ಘಟನೆ ನಡೆದಿದೆ.

ಮೂರ್ನಾಡು ಮರಗೋಡು ನಡುವಿನ ರಸ್ತೆ ಬದಿಯಲ್ಲಿ ಸೂರಜ್ ಎಂಬುವವರು ತ್ಯಾಜ್ಯ ವಿಲೇವಾರಿ ಮಾಡಿದ್ದು,ಈ ಬಗ್ಗೆ ಮರಗೋಡು ಗ್ರಾಮಪಂಚಾಯ್ತಿ ಜಾಗೃತಿ ತಂಡದ ಸದಸ್ಯರಿಗೆ ಮಾಹಿತಿ ಸಿಕ್ಕಿದ್ದು,ತ್ಯಾಜ್ಯವನ್ನು ಹಾಕಿದವರನ್ನು ಸಂಪರ್ಕಿಸಿ ತಕ್ಷಣವೇ ತೆರವು ಮಾಡಲು ಸೂಚಿಸಿ ಪಂಚಾಯ್ತಿ ವತಿಯಿಂದ 2500 ದಂಡ ವಿಧಿಸಲಾಯಿತು.