fbpx

ಅನಧಿಕೃತ ಹೋಂ ಸ್ಟೇ ಮುಚ್ಚಿಸಿ: ಹೋ ಸ್ಟೇ ಅಸೋಸಿಯೇಶನ್ ಆಗ್ರಹ

ಸಾವು ಪ್ರಕರಣ ನಡೆದ ಅನಧಿಕೃತ ಹೋಂ ಸ್ಟೇ

ಇಂದು ಬೆಳಿಗ್ಗೆ ಸುಮಾರು ಆರು ಗಂಟೆಗೆ ಮಡಿಕೇರಿ ನಗರದ ಡೈರಿ ಫಾರಂ ಬಳಿಯ ಹೋಂ ಸ್ಟೇ ಒಂದರಲ್ಲಿ ಗ್ಯಾಸ್ ಲೀಕ್ ಆಗಿ ಪ್ರವಾಸಿಯೊಬ್ಬರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋಂಸ್ಟೇ ಲೈಸೆನ್ಸ್ ರದ್ದು ಮಾಡಲು ಒತ್ತಾಯಿಸಲಾಗುತ್ತಿದೆ.

ಘಟನೆ ನಡೆದಿರುವುದು ಅನಧಿಕೃತ ಹೋಂ ಸ್ಟೇನಲ್ಲಿ ಎಂದು ತಿಳಿದು ಬಂದಿದ್ದು, ಹೋಂ ಸ್ಟೇ ಮಾಲೀಕ ಹೊರ ದೇಶದಲ್ಲಿ ವಾಸ ಮಾಡುತ್ತಿದ್ದಾರೆ.

ಇಂತಹ ಹೋಂಸ್ಟೇಗಳನ್ನು ಮುಚ್ಚಿಸಲು ಒತ್ತಾಯ ಕೇಳಿ ಬಂದಿದ್ದು, ಅನಧಿಕೃತ ಹೋಂ ಸ್ಟೇಗಳನ್ನು ಮುಚ್ಚಿಸಲು ಕೂರ್ಗ್ ಹೋಂ ಸ್ಟೇ ಅಸೋಸಿಯೇಷನ್ ಆಗ್ರಹಿಸಿದೆ. ಈ ಕುರಿತು ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ.ಅನಂತ ಶಯನ ಅವರು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಗಳಿಗೆ ಮನವಿ ಇಟ್ಟಿದ್ದಾರೆ.

error: Content is protected !!