ಅದ್ದೂರಿ ಹಬ್ಬದ ಆಚರಣೆ

ಶ್ರಾವಣ ಮಾಸದ ಮೊದಲ ಹಬ್ಬ ನಾಗರ ಪಂಚಮಿ ಕುಶಾಲನಗರ ಕೂಡಿಗೆ ಶ್ರೀ ಉಧ್ಬವ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು ಬೆಳಗಿನಿಂದಲ್ಲೇ ಹೋಮಹವನಗಳು ನಡೆದಿದ್ದು, ಸುತ್ತಮುತ್ತಲಿನ ಗ್ರಾಮದ ಭಕ್ತರು ಸಾಕ್ಷಿಯಾದರು.

ಗಣಪತಿ ಸುಬ್ರಹ್ಮಣ್ಯ ರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಕೈಂಕರ್ಯ ನಡೆದವು, ದೇವಸ್ಥಾನದ ಮುಂಭಾಗ ದಲ್ಲಿರುವ ಹುತ್ತಕ್ಕೆ ಭಕ್ತರು ಹಾಲೆರೆಯುವ ದೃಶ್ಯ ಸಾಮಾನ್ಯವಾಗಿತ್ತು.