ಅದ್ದೂರಿ ವಿಷ್ಣುಮೂರ್ತಿ ಸತ್ಯನಾರಾಯಣ ಸ್ವಾಮಿ ಉತ್ಸವ

ಕುಶಾಲನಗರ ತಾಲ್ಲೂಕಿನ ನೆಲ್ಯಹುದಿಕೇರಿ ಗ್ರಾಮದಲ್ಲಿ ಪುರಾತನ ಕಾಲದ ಶ್ರೀ ವಿಷ್ಣುಮೂರ್ತಿ ಸತ್ಯನಾರಾಯಣ ಸ್ವಾಮಿ ದೇವರ ವಾರ್ಷಿಕೋತ್ಸವ ಸಂಭ್ರಮ ಸಡಗರಿಂದ ನಡೆಯುತ್ತಿದೆ.

ಗಣಹೋಮದ ಮೂಲಕ ಆರಂಭಗೊಂಡು, ತಕ್ಕ ಮುಖ್ಯಸ್ಥರ ಮನೆಯಿಂದ ದೇವರ ಬಂಡಾರ ಇಳಿಸುವ ಮೂಲಕ ಆರಂಭಗೊಂಡು ಶುದ್ದ ಕಳಸ, ದೇವರ ಬಲಿಗಳು ನಡೆದವು.
ಬಳಿಕ ಸಾಮೂಹಿಕ ಆಶ್ಲೇಶ ಬಲಿ,ಮಹಾಪೂಜೆ, ಪಟ್ಟಣಿ, ಪೊದಮ್ಮ ದೇವಾಲಯದಲ್ಲಿ ಅಕ್ಕಿ ಹೇರುವುದು ದೇವರ ಮೆರವಣಿಗೆ ನಡೆದವು.

ಅಂತಿಮ ದಿನ ತೆಂಗಿನಕಾಯಿ ಕೀಳುವುದು,ಈಡುಗಾಯಿ ಒಡೆಯುವುದು, ತೆಂಗಿನಕಾಯಿಗೆ ಗುಂಡು ಹೊಡೆಯುವುದರಿಂದ ನಂತರ ಅನ್ನಸಂತರ್ಪಣೆ ನಡೆಯಲಿದೆ.

error: Content is protected !!