ಅದ್ದೂರಿಯಾಗಿ ನಡೆದ ಮಕ್ಕಿ ಶಾಸ್ತಾವು ಉತ್ಸವ:ಗಮನ ಸೆಳೆದ ವಿವಿಧ ಕೋಲಗಳು

ಕೊಡಗು: ಹತ್ತಾರು ಗ್ರಾಮಗಳ ಆರಾದ್ಯ ದೈವ ನಾಪೋಕ್ಲು ಸಮೀಪವಿರುವ ಬೇತು ಗ್ರಾಮದಲ್ಲಿರು ಮಕ್ಕಿ ಶಾಸ್ತಾವು ದೇವರ ಉತ್ಸವ ಅದ್ದೂರಿಯಾಗಿ ಜರುಗಿತು.

ತೆರೆ,ದೇವರ ಕೋಲ ಆಕರ್ಶಣೆ:
ಹಬ್ಬದ ಕಟ್ಟು ಬೀಳುತ್ತಿದ್ದಂತೆ ಸಕಲ ದೇವಾತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇ ಬೇಕು,ಬೇಟೆಗೆ ತೆರಳುವುದು,ಎಲೆಗಳನ್ನು ಕೀಳುವುದು ಎಲ್ಲಾ ನಿಷೇಧವಾಗಿರುತ್ತದೆ ದೇವಾಲಯದ ಆವರಣದಲ್ಲಿ ನಡೆಯುವ ತೆರೆಗಳನ್ನು ವೀಕ್ಷಿಸಲು ಸುತ್ತಮುತ್ತಲಿನ ಹತ್ತಾರು ಗ್ರಾಮದಿಂದ ಭಕ್ತರು ಆಗಮಿಸುತ್ತಾರೆ,ಉತ್ಸವ ನಡೆಯುವ ಹಿಂದಿನ ದಿನವೇ ದೇವಾಲಯದ ಅಂಗಳದಲ್ಲಿ ಕಟ್ಟಿಗೆ ಹಾಕಿ ಕೆಂಡ ತಯಾರಿಸಲಾಗುತ್ತದೆ.ಬೆಳಗ್ಗಿನ ಹೊತ್ತಿಗೆ ಅಜ್ಪಪ್ಪ ಕೋಲ ಮದ್ಯಾಹ್ನ ವಿಷ್ಣು ಮೂರ್ತಿ ಕೋಲ ಜರುಗಿದವು,ಹೀಗೆ ಈ ಕೋಲಗಳು ಸುಡುಬಿಸಿಲಿನಲ್ಲಿ ಕೆಂಡದ ಮೇಲೆ ದೈವ ಪರವಷರಾಗಿ ಮೇಲೇರಿಗೆ ಬೀಳುವ ಸಂದರ್ಭ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿ ಈಡೇರಿಸಲು ಬೇಡಿಕೊಳ್ಳುತ್ತಾರೆ ಮತ್ತು ರೋಮಾಂಚನವಾಗಿರುತ್ತದೆ.ಬಳಿಕ ಕೋಲದ ಬಳಿ ಬಂದು ಸಮಸ್ಯೆಗಳನ್ನು ಹೇಳಿಕೊಳ್ಳುವುದು ವಾಡಿಕೆ.
ಮಣ್ಣಿನ ನಾಯಿಯ ಗೊಂಬೆ ಇರಿಸುವುದು:
ಮಕ್ಕಿಯಲ್ಲಿ ಮತ್ತೊಂದು ವಿಶೇಷವೆಂದರೆ ದೇವರ ಮರದ ಸುತ್ತ ಹರಿಕೆ ಕಟ್ಟಿ ಮಣ್ಣಿನ ನಾಯಿಯ ಗೊಂಬೆಗಳನ್ನು ತಲತಲಾಂತರದಿಂದ ಇರಿಸಿಕೊಂಡು ಬರುತ್ತಿದ್ದಾರೆ. ಕಳ್ಳತನ ವಾದರೆ,ಕಳುವ ಮಾಡಿದ ವ್ಯಕ್ತಿ ಹಬ್ಬದ ಸಂದರ್ಭದಲ್ಲೇ ಆಗಮಿಸಿ ತಪ್ಪು ಒಪ್ಪಿಕೂಳ್ಳುತ್ತಾರೆ ಎನ್ನುವ ನಂಬಿಕೆ ಇದೆ.ಇದಲ್ಲದೆ ಸಂತಾನ,ಮದುವೆ,ಕೌಟುಂಬಿಕ ಸಮಸ್ಯೆಗಳು ಹೇಳಿಕೊಂಡರೆ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆಯಿದೆ.
ಮೇ ತಿಂಗಳಿನಲ್ಲಿ ಲಾಕ್ ಡೌನ್ ಇದ್ದ ಕಾರಣ ಉತ್ಸವ ಸ್ಥಗಿತಗೊಳಿಸಲಾಗಿತ್ತು,ಡಿಸಂಬರ್ ನಲ್ಲಿ ನಡೆಯುವ ವಾರ್ಷಿಕ ಉತ್ಸವ ಅದ್ದೂರಿ ನಡೆಯಿತು.ಭಕ್ತರಿಗೆ ಅನ್ನಧಾನದ ವ್ಯವಸ್ಥೆ ಮಾಡಲಾಗಿತ್ತು.