ಅದ್ದೂರಿಯಾಗಿ ನಡೆದ ಬಿದ್ದಾಟಂಡ ನಾಡು ಮಂದ್ ಹುತ್ತರಿ ಕೋಲಾಟ

ಕೊಡಗಿನಲ್ಲೇ ಅತೀ ವಿಶೇಷವಾದ ಬಿದ್ದಾಟಂಡ ನಾಡು ಮಂದ್ ನಲ್ಲಿ ಅದ್ದೂರಿಯಾಗಿ ಹುತ್ತರಿ ಕೋಲಾಟ ನೆರವೇರಿತು.
ಮಕ್ಕಿಶಾಸ್ತವು ದೇವರ ತಿರುವಾಭರಣದೊಂದಿಗೆ ಕಾಪಾಳ ವೇಗವಾಗಿದೆ ಮತ್ತು ಕೊಂಬು ಕೊಟ್ಟು ವಾಲಗದೊಂದಿಗೆ ಮೆರವಣಿಗೆ ಮೂಲಕ ನೂರಂಬಾಡ ಮಂದ್ ನತ್ತ ಬರುತ್ತಿದ್ದಂತೆ ಕೋಲಾಟಕ್ಕೆ ಚಾಲನೆ ದೊರಕಿತು.
“ಇಗ್ಗುತ್ತಪ್ಪ ದೇವರ ಪುತ್ತರಿ ನಮ್ಮೆ ಪೊಯಿಲೇ ಪೊಯಿಲೇ…..” ಎಂದು ಪ್ರವೇಶಿಸುವ ಗ್ರಾಮಸ್ಥರು ಎಲ್ಲರ ಸಮಾಗಮದೊಂದಿಗೆ ಧಾನ್ಯ ಲಕ್ಷ್ಮಿಯನ್ನು ಮಂದ್ ಗೆ ಕರೆ ತರಲಾಯಿತು

ನಾಪೋಕ್ಲು,ಬೇವು ಮತ್ತು ಕೋಕೇರಿ ಗ್ರಾಮಗಳು ಒಳಗೊಂಡಂತೆ ಇತರೆ ಗ್ರಾಮಸ್ಥರು ಸೇರಿ ಆಚರಿಸುವ ಕೋಲಾಟದಲ್ಲಿ ಕಾಪಾಳ ವೇಷಧಾರಿಗಳಿಗೆ ವಿಶೇಷ ಪ್ರಾತಿನಿಧ್ಯ. ತಕ್ಕಮುಖ್ಯಸ್ಥರು ಮಹದೇವರಿಗೆ ಪೂಜೆ ಸಲ್ಲಿಸುತ್ತಿದ್ದಂತೆ ಇತ್ತ ಕಾಪಾಳ ವೇಶಧಾರಿಗಳು ಕುರಂಬರಾಟ್ ಬನದಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಾರೆ.
ಮೂರು ಗ್ರಾಮದ ತಕ್ಕ ಮುಖ್ಯಸ್ಥ ರು ಪರಿಪೂರ್ಣವಾಗಿ ಪವಿತ್ರಾಕ್ಷರ ಮೂರು ಸುತ್ತು ಬರುತ್ತಿದ್ದಂತೆ ದೊಡ್ಡಕೋಲು,ಸಣ್ಣಕತೆಯ,ಪರೆಕಳಿ ಹೀಗೆ ವಿವಿಧ ಸಾಂಪ್ರದಾಯಿಕ ಮನೋರಂಜನೆ ಗ್ರಾಮಸ್ಥರಲ್ಲಿ ಉತ್ಸಾಹ ಮೂಡಿಸುತ್ತಾ,ಎರಡು ದಿನಗಳ ಬಳಿಕ ಸಾಂಪ್ರದಾಯಿಕ ದೇ ವರ ಕಾಲನ್ನು ಮಕ್ಕಳ ದೇವಾಲಯಕ್ಕೆ ಒಪ್ಪಿಸಿ ಆಚರಣೆಗೆ ತೆರೆ ಎಳೆಯಲಾಯಿತು.